ಹೀಗೊಂದು ಪ್ರತಿಕ್ರಿಯೆ .

ವಿಜಯನಗರ ಬಿಂಬದ ಮಕ್ಕಳ ವಿಭಾಗದ ರಂಗಶಾಲೆಯ ಉದ್ಘಾಟನೆಗೆ ಪ್ರೋ . ಜೆ.ಶ್ರಿನಿವಾಸಮೂರ್ತಿ ಮತ್ತು ಸುರೇಶ ಆನಗಳ್ಳಿ ಆಗಮಿಸಿದ್ದರು.

ನಮ್ಮ ಸಂಸ್ಥೆಯಬಗ್ಗೆ ಒಳ್ಳೆಯ ಮಾತನಾಡಿದರು.

ಬ್ಯಾಲೆ ನೋಡಲು ಬಂದಿದ್ದ

ಕೆ.ಎಸ್.ಡಿ.ಎಲ್. ಚಂದ್ರು ” ಇಂದು ನಾನು ಬರೆದೆ ಹೋಗಿದ್ದರೆ ತುಂಬಾ ಮಿಸ್ ಮಾಡಿಕೊಳ್ತಾ ಇದ್ದೆ , ಕಾಡೊಡಲ ಹಾಡಿನಲ್ಲಿ ಮಿನುಗಿದ ಪ್ರತಿಭೆ ……ಭೂಮಿ” ಎಂದಿದ್ದರು

ಫೇಸ್ಬುಕ್ ನಲ್ಲಿ ಒಂದು ಸ್ಟೇಟಸ್ ಹೀಗಿತ್ತು -” ನಿನ್ನೆ (ದಿನಾಂಕ 7.6.2014 ರಂದು) ಬೆಂಗಳೂರಿನ ಹಂಪಿನಗರದ ಗ್ರಂಥಾಲಯದ ಸಭಾಂಗಣದಲ್ಲಿ ‘ವಿಜಯನಗರಬಿಂಬ’ ಸಂಸ್ಥೆಯವರು ತಮ್ಮ ವಿದ್ಯಾರ್ಥಿಗಳ ಮೂಲಕ ‘ಕಾಡೊಡಲ ಹಾಡು’ ಎಂಬ ಹಾಡಿಗೆ ನೃತ್ಯ ರೂಪಕವನ್ನು ಸಂಯೋಜಿಸಿದ್ದರು. ಖ್ಯಾತ ಕವಿ ಕುರುವ ಬಸವರಾಜರ ಪರಿಸರಕಾಳಜಿಯ ಶ್ರೇಷ್ಠ ಕಾವ್ಯಕ್ಕೆ ಮನೋಜ್ಞ ನೃತ್ಯ ಸಂಯೋಜನೆ ಮಾಡಿ ಕೇವಲ 6-7 ವರ್ಷ ವಯಸ್ಸಿನ ನನ್ನ ಮಗಳು ಭೂಮಿಯೂ ಸೇರಿದಂತೆ ಇತರ ಎಲ್ಲಾ ಮಕ್ಕಳಿಗೆ ಹತ್ತೇ ದಿನಗಳಲ್ಲಿ ಸುಮಾರು 45 ನಿಮಿಷಗಳ ನೃತ್ಯ ರೂಪಕವನ್ನು ಹೇಳಿಕೊಟ್ಟ ಕೀರ್ತಿ ಸುಷ್ಮಾಕ್ಕ ಎಂದೇ ಮಕ್ಕಳ ಪ್ರೀತಿಪಾತ್ರರಾಗಿರುವ ಶ್ರೀಮತಿ ಸುಷ್ಮಾ ಅವರಿಗೆ ಸಲ್ಲುತ್ತದೆ.
ಅವರೊಡನೆ ವಿಜಯನಗರಬಿಂಬದ ಎಲ್ಲಾ ಹಿರಿಯರೂ ಕಿರಿಯರೂ ಒಂದು ಕುಟುಂಬದಂತೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಾ ಮಕ್ಕಳಲ್ಲಿ ಪ್ರಗತಿಪರ ಮನಸ್ಥಿತಿಯನ್ನು, ಸೃಜನಶೀಲತೆಯನ್ನು ರಂಗದ ಮೂಲಕ, ಹಾಡಿನ ಮುಖಾಂತರ, ಸಾಹಿತ್ಯ ಮುಖೇನ ಬಿತ್ತುವಲ್ಲಿ ಶ್ರಮಿಸುತ್ತಿರುವುದು ನನ್ನಂತವರಿಗೆ ಸಂತೋಷ ತಂದಿದೆ.
ವಿಜಯನಗರಬಿಂಬದ ಎರಡು ದಶಕಗಳ ಈ ಒಳ್ಳೆಯ ಪ್ರಯತ್ನಕ್ಕೆ ನನ್ನ ಅನಂತಾನಂತ ವಂದನೆಗಳು. ಅವರ ಈ ಯತ್ನ ಕೇವಲ ಉತ್ತಮ ನಟರನ್ನು ಸೃಷ್ಟಿಸುವುದಿಲ್ಲ; ಆದರೆ ಸತ್ಪ್ರಜೆಗಳನ್ನು, ಈ ದೇಶದ, ಸಮಾಜದ ಬಗ್ಗೆ ಆಲೋಚಿಸುವಂತಹ ಮನುಷ್ಯರನ್ನು ಸೃಷ್ಠಿ ಮಾಡಬಲ್ಲದು ಎಂಬುದು ನನ್ನ ಅಭಿಮತ………”

ಹಂಚಿಕೊಳ್ಳೊಣ ಎನ್ನಿಸಿತು…

Leave a comment

Website Powered by WordPress.com.

Up ↑