ಚಿನಕುರಳಿಗಳ ಹಾವಳಿ

ದೀಪಾವಳಿಯ ಸಡಗರದಲ್ಲಿ ಮತ್ತೊಂದು ಉಲ್ಲಾಸಕರ ಅಂಶವೆಂದರೆ ವಿಜಯನಗರ ಬಿಂಬದಲ್ಲಿ ಭರದಿಂದ ಸಾಗಿದೆ ಚಿನಕುರಳಿ ನಾಟಕೋತ್ಸವದ ತಯಾರಿ. ಮಕ್ಕಳ ನಾಟಕ ಬರೆದು, ಅವರೆ ನಿದೇ೯ಶನ ಮಾಡಿ , ಅವರೇ ತಾಲೀಮು ಮಾಡಲು ತಾಲೀಮು ಕೊಠಡಿಯನ್ನು ಕಾಯ್ದಿರಿಸುವುದು, ಅತಿಥಿಗಳನ್ನು ತಾವೇ ಕರಿಯುವುದು ಮುಂತಾದ ನಟನೆಯಲ್ಲದೆ ನಾಟಕೋತ್ಸವವನ್ನು ಆಯೋಜಿಸುವ ಎಲ್ಲ ಹೊಣೆ ಹೊತ್ತಿದ್ದಾರೆ ಚಿಣ್ಣರು. ಹಾಗಾಗಿ ಚಿನಕುರಳಿ ನಾಟಕೋತ್ಸವ ಬಹಳ ಮಹತ್ವದ್ದಾಗಿದೆ. ಮಕ್ಕಳ ಆಲೋಚನೆಗಳಿಗೆ ಹಿಡಿದ ಕನ್ನಡಿ ಈ ಚಿನಕುರಳಿ ನಾಟಕೋತ್ಸವ. ಇದೇ ಅಕ್ಟೋಬರ್ 27, 28, 29, 2017 ಅಂದರೆ... Continue Reading →

ಬಣ್ಣದ ಐಡಿಯಾ !!

ಚಿಣ್ಣರೆಲ್ಲ ಒಟ್ಟುಗೂಡಿ ಬಣ್ಣಗಳ ಜೊತೆಗೆ ಆಡಿ ಚಿತ್ರಗಳು ಬಂದವು ಚಿತ್ರಮುಂದೆ ಇಟ್ಟುಕೊಂಡು ಅದರೊಳಗೊಂದು ಲಹರಿ ಕಂಡು ಕಥೆಗಳು ನಿಂದವು ಕಂಡದ್ದನ್ನು ಮತ್ತೆ ಮುಟ್ಟಿ ಕಥನವಾಗಿ ಅದನ ಕಟ್ಟಿ ಹಬ್ಬಗಳು ಬಂದವು ಹೌದು ಚಿತ್ರಕಥನ ನಡೆಯುವ, ಆ ಎರಡು ದಿನ ಹಬ್ಬವೇ ಹೌದು.. ನಮ್ಮ ಈ ಸಂಭ್ರಮದಲ್ಲಿ ಭಾಗಿಯಾಗಲು ಗಣ್ಯರು ಒಪ್ಪಿದ್ದಾರೆ 9 ಆಗಸ್ಟ್ ಉದ್ಘಾಟನೆ ಮಾಡಲು ಬೈನಾಲೆ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಎಂ.ಎಸ್.ಮೂರ್ತಿ ಅವರು ಆಗಮಿಸಲಿದ್ದಾರೆ.ಅಂದಿನ ಅತಿಥಿಗಳಾಗಿ ವೇದಿಕೆ ತಂಡದ ನಿರ್ದೇಶಕರಾದ ಋತ್ವಿಕ್ ಸಿಂಹ ಅವರು ಆಗಮಿಸಲಿದ್ದಾರೆ... Continue Reading →

ಸಂಸ್ಕೃತ ನಾಟಕಗಳಲ್ಲೇಲ್ಲ ವಿಭಿನ್ನ ಧಾಟಿಯ ನಾಟಕ ಈ ಮೃಚ್ಛಕಟಿಕ. ದಾನಮಾಡಿ ದರಿದ್ರನಾದ ವರ್ತಕ, ಶೀಲವಂತ ಗಣಿಕೆ, ಹೀಗೆ ಈ ನಾಟಕದ ಪಾತ್ರಗಳೂ ವಿಭಿನ್ನ. ಶೂದ್ರಕ ಕವಿಯ ಈ ನಾಟಕವನ್ನು ಹಲವರು ಅನುವಾದಿಸಿದ್ದಾರೆ. ಪ್ರೋ.ಬಿ.ಚಂದ್ರಶೇಖರ್ ಅನುವಾದಿಸಿರುವ ಮಣ್ಣಿನ ಬಂಡಿ ತಯಾರಾಗುತ್ತಿದೆ. ಈ ಸಾಲಿನ ಡಿಪ್ಲೊಮಾ ವಿದ್ಯಾರ್ಥಿಗಳು ಅಭಿನಯಿಸುತ್ತಿದ್ದಾರೆ ಜೂನ್ 30 ರಂದು ಸೇವಾಸದನದಲ್ಲಿ ಪ್ರದರ್ಶಿಸಲಿದ್ದಾರೆ. ಖಂಡಿತಾ ಬನ್ನಿ

26 ಜನವರಿ 2014 ರಂದು ಪುಟಾಣಿ ಘಟಿಕೋತ್ಸವ

ಈ ಸಾಲಿನ ಅಂದರೆ 2013-14 ರ ಮಕ್ಕಳ ವಿಭಾಗದ ಪ್ರಶಸ್ತಿ ಪತ್ರ ವಿತರಣಾ ಸಮಾರಂಭ ಇದೇ ತಿಂಗಳ 26 ರಂದು ಬೆಳಗ್ಗೆ 11 ಕ್ಕೆ ಚಿತ್ರಕೂಟ ಶಾಲೆಯಲ್ಲಿ ಏರ್ಪಡಿಸಿದ್ದೇವೆ. ಅಂದು ಬೊಂಬೆ ಹಬ್ಬದ 3 ಅತ್ಯುತ್ತಮ ನಾಟಕಗಳಿಗೆ ಬಹುಮಾನ ನೀಡಲಾಗುವುದು. ಅಲ್ಲದೆ ತರಗತಿಗಳ ವರದಿಯನ್ನು ವಿದ್ಯಾರ್ಥಿಗಳು ಬರೆದು ನೀಡಿದ್ದಾರೆ. ಅದರಲ್ಲಿ ಅತ್ಯುತ್ತಮ ವರದಿಗೆ ಬಹುಮಾನ ನೀಡಲಾಗುವುದು ಮುಖ್ಯ ಅತಿಥಿಗಳು ಹಿರಿಯರ ರಂಗ ಸಂಘಟಕ, ನಿರ್ದೇಶಕರು ಆದ ಶ್ರೀ ಕೆ.ವಿ.ನಾಗರಾಜ ಮೂರ್ತಿ. ಎಲ್ಲರಿಗೂ ಆತ್ಮೀಯ ಸ್ವಾಗತ. ಬನ್ನಿ ಮಕ್ಕಳ... Continue Reading →

ಇದೇ ಅಕ್ಟೋಬರ್ 19 ಮತ್ತು 20, 2013 ರಂದು ಬಹು ನಿರೀಕ್ಷಿತ ಕಾರ್ಯಕ್ರಮ ಬೊಂಬೆ ಹಬ್ಬ ಮಕ್ಕಳ ಕಿರು ನಾಟಕೋತ್ಸವಕ್ಕೆ 7 ತಂಡಗಳು ತಯಾರಿ ನಡೆಸಿವೆ. ಭರದಿಂದ ಸಾಗಿದೆ ತಯಾರಿ . ನಿರ್ದೇಶಕರು ತಾಲೀಮಿನ schedule ಮಾಡಿ ತಾಲಿಮನ್ನು ನಡೆಸಿಕೊಂದು ಹೋಗುತ್ತಿದ್ದಾರೆ. ಅವರ ನಾಟಕದ ಕಥೆಗಳನ್ನು approve ಮಾಡಲಾಗಿದೆ. ಬನ್ನಿ ಬೊಂಬೆ ಹಬ್ಬಕ್ಕೆ. . . ಎಲ್ಲರಿಗೂ ವಿಜಯನಗರ ಬಿಂಬದ ಶಿಕ್ಷಕ ವೃಂದ ಮತ್ತು ಪುಟಾಣಿ ನಿರ್ದೇಶಕರು ಮತ್ತು ನಟರ ಪರವಾಗಿ ಸ್ವಾಗತ ಸುಸ್ವಾಗತ.

ಮಕ್ಕಳು ಮಾಡಿರುವ ಚಿತ್ರಗಳು ಸಕ್ಕತ್ತಾಗಿದೆ, ಕತೆಗಳು super...... ತಮಾಷೆಯಲ್ಲ ಬನ್ನಿ ನೋಡಿ ಕೇಳಿ ಆನಂದಿಸಿ ಎರಡುದಿನಗಳ ಕತೆಗಳ ಹಬ್ಬ.... ಆಗಸ್ಟ್ 10, 2013 ಶನಿವಾರ, ಸಂಜೆ 6:30 ಗೆ ಉದ್ಘಾಟನೆ ಹೆಸರಾಂತ ಕತೆಗಾರರಾದ ವಸುದೇಂದ್ರ ಅವರಿಂದ ಮತ್ತು ನಾಲ್ಕು ಕತೆಗಳು ಪ್ರದರ್ಶನ ಗೊಳ್ಳಲಿವೆ ಆಗಸ್ಟ್ 11, 2013, ಭಾನುವಾರ, ಸಂಜೆ 6:30 ಕ್ಕೆ ಐದು ಕತೆಗಳ ಪ್ರದರ್ಶನ ಅಂದಿನ ಮುಖ್ಯ ಅತಿಥಿಗಳು ಹೆಸರಾಂತ ಶಿಕ್ಷಣ ತಜ್ಞ್ರರಾದ ವೀಣಾ ಮೋಹನ್, ಎಲ್ಲರಿಗೂ ಆದರದ ಸ್ವಾಗತ.......

ನಂದ ಭೂಪತಿ ನಾಟಕದಲ್ಲಿ ರಂಗದ ಹಿಂದೆ ಅನೇಕ ಸೃಜನ ಶೀಲ ಮನಸ್ಸುಗಳು ಕೆಲಸ ಮಾಡಿವೆ. ರಚನೆ - ಗೋಪಾಲ್  ವಾಜಪೇಯಿ ಸಂಗೀತ - ರಾಜ್ ಗುರು ಬೆಳಕು ಟಿ.ಎಂ.ನಾಗರಾಜ್ ಪ್ರಸಾಧನ, ರಂಗಸಜ್ಜಿಕೆ, ರಂಗ ಪರಿಕರ - ಮಾಲತೇಶ್ ಬಡಿಗೇರ್ ವಸ್ತ್ರವಿನ್ಯಾಸ - ಶೋಭಾ ವೆಂಕಟೇಶ್ ನಿರ್ದೇಶನ - ಡಾ.ಎಸ್.ವಿ.ಕಶ್ಯಪ್ ಮತ್ತು ಎಸ್.ವಿ ಸುಷ್ಮಾ. ಅಭಿನಯಿಸುವವರು ಕೇಂದ್ರದ ಕಳೆದ ವರ್ಷದ ಮತ್ತು ಈ ವರ್ಷದ ವಿದ್ಯಾರ್ಥಿಗಳು . ಖಂಡಿತಾ ಬನ್ನಿ

Powered by WordPress.com.

Up ↑