20ನೇ ವರ್ಷದ ಸಂಭ್ರಮದ “ಚಿತ್ರಕಥನ ” – ತಯಾರಿಯಲ್ಲಿ ಚಿಣ್ಣರು

ಪ್ರತಿ ವಷ೯ದಂತೆ ಈ ವಷ೯ ಚಿತ್ರಕಥನ ಇರುತ್ತದೆ. ಆದರೆ ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ. ಅದರ ವಿವರ ಗಳು ಕ್ರಮೇಣ ನಿಮಗೆ ತಿಳಿಯುತ್ತದೆ, ಸಧ್ಯಕ್ಕೆ ಮಕ್ಕಳು ಹುರುಪಿನಿಂದ ತಯಾರಿ ನಡೆಸಿದ್ದಾರೆ ಅಂತಷ್ಟೆ ಹೇಳಬಹುದು. ಅವರ ಪುರಾವೆ ಇಲ್ಲಿದೆ. ಆಗಸ್ಟ್ 30 ರಂದು ಮಕ್ಕಳ ವಿಭಾಗದಿಂದ ಚಿತ್ರಕಥೆ - ಚಿತ್ರ ಚೌಕಟ್ಟಿನಲ್ಲಿ ಕಥೆ ಗಲಕ ಹಬ್ಬ' ಕಾಲೆಂಡರ್ ಈಗ್ಗೆ Mark ಮಾಡಿಕೊಳ್ಳಿ.

26 ಜನವರಿ 2014 ರಂದು ಪುಟಾಣಿ ಘಟಿಕೋತ್ಸವ

ಈ ಸಾಲಿನ ಅಂದರೆ 2013-14 ರ ಮಕ್ಕಳ ವಿಭಾಗದ ಪ್ರಶಸ್ತಿ ಪತ್ರ ವಿತರಣಾ ಸಮಾರಂಭ ಇದೇ ತಿಂಗಳ 26 ರಂದು ಬೆಳಗ್ಗೆ 11 ಕ್ಕೆ ಚಿತ್ರಕೂಟ ಶಾಲೆಯಲ್ಲಿ ಏರ್ಪಡಿಸಿದ್ದೇವೆ. ಅಂದು ಬೊಂಬೆ ಹಬ್ಬದ 3 ಅತ್ಯುತ್ತಮ ನಾಟಕಗಳಿಗೆ ಬಹುಮಾನ ನೀಡಲಾಗುವುದು. ಅಲ್ಲದೆ ತರಗತಿಗಳ ವರದಿಯನ್ನು ವಿದ್ಯಾರ್ಥಿಗಳು ಬರೆದು ನೀಡಿದ್ದಾರೆ. ಅದರಲ್ಲಿ ಅತ್ಯುತ್ತಮ ವರದಿಗೆ ಬಹುಮಾನ ನೀಡಲಾಗುವುದು ಮುಖ್ಯ ಅತಿಥಿಗಳು ಹಿರಿಯರ ರಂಗ ಸಂಘಟಕ, ನಿರ್ದೇಶಕರು ಆದ ಶ್ರೀ ಕೆ.ವಿ.ನಾಗರಾಜ ಮೂರ್ತಿ. ಎಲ್ಲರಿಗೂ ಆತ್ಮೀಯ ಸ್ವಾಗತ. ಬನ್ನಿ ಮಕ್ಕಳ... Continue Reading →

ತಾಲೀಮು… ತಾಲೀಮು….. ತಾಲೀಮು

ಡಿಸೆಂಬರ್, 22, 2013 - ನಮ್ಮ ಸಂಸ್ಥಾಪಕರಾದ ಎ.ಎಸ್. ಮೂರ್ತಿ ಯವರ ನೆನಪಿನಲ್ಲಿ ಕಲೋತ್ಸವ.... ಅದರಲ್ಲಿ ನಮ್ಮ ವಿದ್ಯಾರ್ಥಿಗಳಿಂದ ಬೀದಿ ನಾಟಕ ಮತ್ತು ರಂಗ ಗೀತೆ ದೃಶ್ಯಾವಳಿ.. ಅದರ ತಾಲೀಮು. ಜನವರಿ,5, 2014 - ನಾಟಕ ಬೆಂಗಳೂರು - ರವೀಂದ್ರ ಕಲಾಕ್ಷೇತ್ರ - 50 ನಾಟಕೋತ್ಸವದಲ್ಲಿ ಶುದ್ಧಗೆ ನಾಟಕ. ಅದರ ತಾಲೀಮು. ಜನವರಿ, 17, 2014 -  ನಮ್ಮ ರಂಗ ಶಿಕ್ಷಣ ಕೇಂದ್ರದ ಮಕ್ಕಳ ವಿಭಾಗದ ವಿದ್ಯಾರ್ಥಿಗಳಿಂದ ಎರಡು ಪ್ರಯೋಗಗಳು ಅದರ ತಾಲೀಮು..... ಒಟ್ಟು 5  ಹೊಸ... Continue Reading →

ಇದೇ ಅಕ್ಟೋಬರ್ 19 ಮತ್ತು 20, 2013 ರಂದು ಬಹು ನಿರೀಕ್ಷಿತ ಕಾರ್ಯಕ್ರಮ ಬೊಂಬೆ ಹಬ್ಬ ಮಕ್ಕಳ ಕಿರು ನಾಟಕೋತ್ಸವಕ್ಕೆ 7 ತಂಡಗಳು ತಯಾರಿ ನಡೆಸಿವೆ. ಭರದಿಂದ ಸಾಗಿದೆ ತಯಾರಿ . ನಿರ್ದೇಶಕರು ತಾಲೀಮಿನ schedule ಮಾಡಿ ತಾಲಿಮನ್ನು ನಡೆಸಿಕೊಂದು ಹೋಗುತ್ತಿದ್ದಾರೆ. ಅವರ ನಾಟಕದ ಕಥೆಗಳನ್ನು approve ಮಾಡಲಾಗಿದೆ. ಬನ್ನಿ ಬೊಂಬೆ ಹಬ್ಬಕ್ಕೆ. . . ಎಲ್ಲರಿಗೂ ವಿಜಯನಗರ ಬಿಂಬದ ಶಿಕ್ಷಕ ವೃಂದ ಮತ್ತು ಪುಟಾಣಿ ನಿರ್ದೇಶಕರು ಮತ್ತು ನಟರ ಪರವಾಗಿ ಸ್ವಾಗತ ಸುಸ್ವಾಗತ.

ವಿಜಯನಗರ ಬಿಂಬ , ರಂಗ ಶಿಕ್ಷಣ ಕೇಂದ್ರವು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಸಹಯೋಗದಲ್ಲಿ ಒಂದು ವರ್ಶದ ರಂಗಭೂಮಿ ಡಿಪ್ಲೊಮಾವನ್ನು ಪ್ರಾರಂಭಿಸಿರುವುದು ತಮಗೆಲ್ಲರಿಗೂ ಗೊತ್ತಿರುವ ವಿಷಯವೇ... ನಮ್ಮ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತು 100% ಫಲಿತಾಂಶ ಬಂದಿರುವುದೂ ಹಳೆಯ ವಿಷಯ.. ಇದೀಗ ಕೇಳಿ ಹೊಸ ವಿಷಯ ಸೆಪ್ಟಂಬರ್ ೫ ರಂದು ಆ ಎಲ್ಲ ವಿದ್ಯಾರ್ಥಿಗಳಿಗೆ ಘಟಿಕೋತ್ಸವವನ್ನು ಹಮ್ಮಿಕೊಂಡಿದ್ದೇವೆ. ಅಂದರೆ ವಿಶ್ವವಿದ್ಯಾನಿಲಾಯವು ಅವರಿಗೆ ನೀಡಿರುವ ಅಂಕ ಪಟ್ಟಿಯನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮ. ಅಂದಿನ ಮುಖ್ಯ ಅತಿಥಿಗಳಾಗಿ ಹಿರಿಯ ರಂಗತಜ್ಞರಾದ... Continue Reading →

ಮಕ್ಕಳು ಮಾಡಿರುವ ಚಿತ್ರಗಳು ಸಕ್ಕತ್ತಾಗಿದೆ, ಕತೆಗಳು super...... ತಮಾಷೆಯಲ್ಲ ಬನ್ನಿ ನೋಡಿ ಕೇಳಿ ಆನಂದಿಸಿ ಎರಡುದಿನಗಳ ಕತೆಗಳ ಹಬ್ಬ.... ಆಗಸ್ಟ್ 10, 2013 ಶನಿವಾರ, ಸಂಜೆ 6:30 ಗೆ ಉದ್ಘಾಟನೆ ಹೆಸರಾಂತ ಕತೆಗಾರರಾದ ವಸುದೇಂದ್ರ ಅವರಿಂದ ಮತ್ತು ನಾಲ್ಕು ಕತೆಗಳು ಪ್ರದರ್ಶನ ಗೊಳ್ಳಲಿವೆ ಆಗಸ್ಟ್ 11, 2013, ಭಾನುವಾರ, ಸಂಜೆ 6:30 ಕ್ಕೆ ಐದು ಕತೆಗಳ ಪ್ರದರ್ಶನ ಅಂದಿನ ಮುಖ್ಯ ಅತಿಥಿಗಳು ಹೆಸರಾಂತ ಶಿಕ್ಷಣ ತಜ್ಞ್ರರಾದ ವೀಣಾ ಮೋಹನ್, ಎಲ್ಲರಿಗೂ ಆದರದ ಸ್ವಾಗತ.......

ನಂದ ಭೂಪತಿ ನಾಟಕದಲ್ಲಿ ರಂಗದ ಹಿಂದೆ ಅನೇಕ ಸೃಜನ ಶೀಲ ಮನಸ್ಸುಗಳು ಕೆಲಸ ಮಾಡಿವೆ. ರಚನೆ - ಗೋಪಾಲ್  ವಾಜಪೇಯಿ ಸಂಗೀತ - ರಾಜ್ ಗುರು ಬೆಳಕು ಟಿ.ಎಂ.ನಾಗರಾಜ್ ಪ್ರಸಾಧನ, ರಂಗಸಜ್ಜಿಕೆ, ರಂಗ ಪರಿಕರ - ಮಾಲತೇಶ್ ಬಡಿಗೇರ್ ವಸ್ತ್ರವಿನ್ಯಾಸ - ಶೋಭಾ ವೆಂಕಟೇಶ್ ನಿರ್ದೇಶನ - ಡಾ.ಎಸ್.ವಿ.ಕಶ್ಯಪ್ ಮತ್ತು ಎಸ್.ವಿ ಸುಷ್ಮಾ. ಅಭಿನಯಿಸುವವರು ಕೇಂದ್ರದ ಕಳೆದ ವರ್ಷದ ಮತ್ತು ಈ ವರ್ಷದ ವಿದ್ಯಾರ್ಥಿಗಳು . ಖಂಡಿತಾ ಬನ್ನಿ

ಮಕ್ಕಳ ಸೃಜನಶೀಲತೆಯ ಅಭಿವ್ಯಕ್ಟಿ ಹಲವಾರು ರೀತಿಯಲ್ಲಿ ಆಗುತ್ತದೆ. ಅದರಲ್ಲಿ ಚಿತ್ರಕಲೆಯೂ ಒಂದು. ದುರಾದೃಷ್ಟವಶಾತ್, ಅಧುನಿಕ ಕಲೆ ಅಥವ  Modern art ಎನ್ನುವುದು ಗೋಜಲಿಗೆ ಸಿಕ್ಕ ವಿಷಯವಾಗಿದೆ. ಕಲಾವಿದರು ಮಾಡುವ ಕೃತಿಗಳು ನಮಗೆ ಅರ್ಥವಾಗುತ್ತಿಲ್ಲ ಎನ್ನುವ ಕಾರಣಕ್ಕೆ ದೃಶ್ಯ ಅಥವ ಚಿತ್ರಕಲಾ ಮಾಧ್ಯಮವನ್ನು skeptical ಆಗಿ ನೋಡುವ ಮನಸ್ಥಿತಿ ಹೊಂದಿದ್ದಾರೆ. ಕಲಾವಿದರು ಸಂಗೀತದ ಇಂದು ರಾಗದ ಸ್ವರ ಪ್ರಸ್ಥಾರ ಮಾಡಿದಾಗ ಅದನ್ನು ಅರ್ಥ ಮಾಡಿಕೊಂಡೆ ಕೇಳುಗರು ತಲೆ ದೂಗುತ್ತಾರಾ ಎನ್ನುವ ಪ್ರಶ್ನೆ ಹಾಕುತ್ತಾರೆ. ನಮ್ಮ ಕಲಾಕೃತಿಗಳಿಗೂ ಅರ್ಥವನ್ನು ಹೇರ... Continue Reading →

Powered by WordPress.com.

Up ↑