2014-15 ಸಾಲಿನ ಮಕ್ಕಳ ವಿಭಾಗದಿಂದ ಎರಡು ಹೊಸ ನಾಟಕಗಳು

ಜನವರಿ 11 , 2015 ರಂದು ಎ.ಡಿ.ಎ ರಂಗಮಂದಿರದಲ್ಲಿ ಈ ಸಾಲಿನ ಎರಡು ಹೊಸ ನಾಟಕಗಳನ್ನು ಆಯೋಜಿಸಲಾಗಿತ್ತು. ಹೊತ್ತಿಗೆಯ ಹೊತ್ತು (ರಚನೆ, ನಿರ್ದೇಶನ - ಡಾ||ಎಸ್.ವಿ.ಕಶ್ಯಪ್) ಕಾಡ್ನಲ್ಲೊಂದೂರಿತ್ತಂತೆ ( ರಚನೆ, ನಿರ್ದೇಶನ - ಶೈಲೇಶ್ ಕುಮಾರ್) ಅಲ್ಲದೆ ಈ ಸಾಲಿನ ಚಿತ್ರಕಥನ ಮತ್ತು ಬೊಂಬೆ ಹಬ್ಬದ ಕತೆಗಳು, ನಾಟಕಗಳು ಮತ್ತು ಚಿತ್ರಗಳಿರುವ ಪದಚಿತ್ತಾರ ವನ್ನು ಬಿಡುಗಡೆ ಮಾಡಲಾಯ್ತು. ಹಿರಿಯ ಸಾಹಿತಿಗಳು, ವಿಮರ್ಶಕರು  ಆದ ಎಂ.ಎಚ್.ಕೃಷ್ಣಯ್ಯ ಅವರು ಎರಡು ನಾಟಕಗಳನ್ನು ಪ್ರಶಂಶಿಸಿದರು. ಈ ಟಿ.ವಿ ನ್ಯೂಸ್ ಕನ್ನಡ ವಾಹಿನಿಯ... Continue Reading →

ಶಿವಮೊಗದ ಸಹ್ಯಾದ್ರಿ ನಾಟಕೋತ್ಸವ ದಲ್ಲಿ ಶುದ್ಧಗೆ

ಶಿವಮೊಗ ದಲ್ಲಿ ನಡೆದ ಸಹ್ಯಾದ್ರಿ ನಾಟಕೋತ್ಸವದಲ್ಲಿ ಶುದ್ಧಗೆ ಪ್ರದರ್ಶನವಾಗಿ ತುಂಬಿದ ರಂಗಮಂದಿರದ ಪ್ರಶಂಸೆಗೆ ಪಾತ್ರವಾಯ್ತು . ಸಹ್ಯಾದ್ರಿ ಕಲಾ ತಂಡದ ಶ್ರೀ ಲವ ಅವರಿಗೆ, ಶ್ರೀ. ಸುರೇಶ (ಚಿಕ್ಕ) ಅವರಿಗೆ, ಕನ್ನಡ ಸಂಸ್ಕೃತಿ ಇಲಾಖೆಗೆ, ಮತ್ತು ಶಿವಮೊಗದ ಎಲ್ಲ ರಂಗಾಸಕ್ತರಿಗೆ ಧನ್ಯವಾದಗಳು.

ಒಂದರ ಮೇಲೊಂದು ಚಟುವಟಿಕೆಗಳಿಂದ ಗಿಜಿಗುಡುತ್ತಿದೆ ವಿಜಯನಗರ ಬಿಂಬ

ವಿಜಯನಗರ ಬಿಂಬದ ಅಂಗಳದಲ್ಲಿ ಆಗಸ್ಟ್ 9 ಮತ್ತು 10 ಚಿತ್ರಕಥನ ನಡೆಯಿತು. ಉದ್ಘಾಟಿಸಿ ಮಾತನಾಡಿದ ಖ್ಯಾತ ಎಂ.ಎಸ್. ಮೂರ್ತಿ ನಮ್ಮ ಮಕ್ಕಳ ಚಿತ್ರಕಥನ ವೀಕ್ಷಿಸಿ ಹೀಗೆಂದರು " Ways of seeing an artwork ಬಹಳ ಮುಖ್ಯ, ಇಲ್ಲದಿದ್ದರೆ ಕಲಾವಿದರ ಶ್ರಮ ವ್ಯರ್ಥವಾಗುತ್ತದೆ. ಸೃಜನಶೀಲ ಮನಸ್ಸುಗಳನ್ನು ಹುಟ್ಟು ಹಾಕುವ ಕೆಲಸ ವಿಜಯನಗರ ಬಿಂಬ ಮಾಡುತ್ತಿದೆ ಎಂದು ಶ್ಲಾಘಿಸಿದರು. ಅಂದು ಖ್ಯಾತ ನಿರ್ದೇಶಕರಾದ ಋತ್ವಿಕ್ ಸಿಂಹ ಅವರು ಅತಿಥಿಯಾಗಿದ್ದರು. ಎರಡನೇ ದಿನ ಖ್ಯಾತ ಕವಯಿತ್ರಿ ರಂಜನಿ ಪ್ರಭು ಅವರು... Continue Reading →

ಹೀಗೊಂದು ಪ್ರತಿಕ್ರಿಯೆ .

ವಿಜಯನಗರ ಬಿಂಬದ ಮಕ್ಕಳ ವಿಭಾಗದ ರಂಗಶಾಲೆಯ ಉದ್ಘಾಟನೆಗೆ ಪ್ರೋ . ಜೆ.ಶ್ರಿನಿವಾಸಮೂರ್ತಿ ಮತ್ತು ಸುರೇಶ ಆನಗಳ್ಳಿ ಆಗಮಿಸಿದ್ದರು. ನಮ್ಮ ಸಂಸ್ಥೆಯಬಗ್ಗೆ ಒಳ್ಳೆಯ ಮಾತನಾಡಿದರು. ಬ್ಯಾಲೆ ನೋಡಲು ಬಂದಿದ್ದ ಕೆ.ಎಸ್.ಡಿ.ಎಲ್. ಚಂದ್ರು " ಇಂದು ನಾನು ಬರೆದೆ ಹೋಗಿದ್ದರೆ ತುಂಬಾ ಮಿಸ್ ಮಾಡಿಕೊಳ್ತಾ ಇದ್ದೆ , ಕಾಡೊಡಲ ಹಾಡಿನಲ್ಲಿ ಮಿನುಗಿದ ಪ್ರತಿಭೆ ......ಭೂಮಿ" ಎಂದಿದ್ದರು ಫೇಸ್ಬುಕ್ ನಲ್ಲಿ ಒಂದು ಸ್ಟೇಟಸ್ ಹೀಗಿತ್ತು -" ನಿನ್ನೆ (ದಿನಾಂಕ 7.6.2014 ರಂದು) ಬೆಂಗಳೂರಿನ ಹಂಪಿನಗರದ ಗ್ರಂಥಾಲಯದ ಸಭಾಂಗಣದಲ್ಲಿ 'ವಿಜಯನಗರಬಿಂಬ' ಸಂಸ್ಥೆಯವರು ತಮ್ಮ ವಿದ್ಯಾರ್ಥಿಗಳ... Continue Reading →

ಚಿತ್ತಾರದಲ್ಲೊಂದು ಲಹರಿ.

ಚಿತ್ತಾರದಲ್ಲಿ ಪಟಾಣಿಗಳನ್ನು ಸಂಭಾಲಿಸುವಾಗ ಶಿಕ್ಷಕವರ್ಗದ ಪ್ರತಿಯೊಬ್ಬರೂ ಪ್ರದರ್ಶಕರಾಗಿರಬೇಕು. ಪುಟಾಣಿಗಳ ಪಾಟಿ ಸವಾಲನ್ನು ಎದುರಿಸಲು ಮಾನಸಿಕವಾಗಿ ತಯಾರಾಗುವ ವೇಳೆಗೆ ಪುಟಾಣಿಗಳು ತಮ್ಮ ಮುಗ್ಧ ತರಲೆಗಳಿಂದ ಕೆಲವು ಅಚ್ಚಳಿಯದ ನೆನಪುಗಳನ್ನು ನಮ್ಮ ಮನಸ್ಸಿನ ಮೇಲೆ ಅಚ್ಚೊತ್ತಿದರು. ಇಲ್ಲಿವೆ ಕೆಲವು ಝಲಕ್ ಗಳು. ತರಲೆ ನಂ.1- ಪುಟಾಣಿ ಒಬ್ಬ ತನ್ನ ಹೆಸರನ್ನು ಸುಕೃತ್,  ಸುಹೃತ್, ಸುವ್ರತ್, ಸುವೃತ್, ಸೂರಜ್ ಹೀಗೆ ದಿನಕ್ಕೊಂದರಂತೆ ಬದಲಿಸುತ್ತಿದ್ದ. ಕೊನೆಗೆ ಅಪ್ಲಿಕೇಷನ್ ಫಾರಂ ನೋಡಿ ಅವನ ಹೆಸರು ಸೂರಜ್ ಎಂದು ತೀರ್ಮಾನವಾಯ್ತು.:-) ತರಲೆ ನಂ.2- ಕ್ರಾಫ್ಟ್ ಮಾಡಲು... Continue Reading →

ನಿಜಕ್ಕೂ ಇದು ಚಿತ್ತಾರ. .

ರಂಗಶಿಕ್ಷಣ ಕೇಂದ್ರ ಏರ್ಪಡಿಸಿದ್ದ ಮಕ್ಕಳರಂಗ ಕಾರ್ಯಾಗಾರ ಚಿಣ್ಣರ ಚಿಣ್ಣರ ಚಿತ್ತಾರ2014 ಅದ್ಭುತವಾಗಿ ನೆರವೇರಿತು. 3 ರಿಂದ 6 ವರ್ಷದ ಪುಟಾಣಿಗಳನ್ನು ಒಂದೆಡೆ ಕೂರಿಸುವುದೇ ಕಷ್ಟ ಅಂಥದ್ದರಲ್ಲಿ ಅವರಿಗೆ ನಾಟಕ ಬರೆದು ಅವರಿಂದ ಅದನ್ನು ಪ್ರದರ್ಶನ ಮಾಡಿಸುವುದು ಎಂದರೆ  ಸೆಮಿನಾರ್ ಗಳಲ್ಲಿ ಆಗಾಗ ಕೇಳಿಬರುವ ಈ ಸಾಲಿದ್ದಂತೆ - ರಂಗಭೂಮಿ ಎದುರಿಸಿತ್ತಿರುವ ದೊಡ್ಡ ಸವಾಲು. ಆ ಚಿಣ್ಣರ ಪುಟ್ಟ ಮುಗ್ಧಮನಸ್ಸುಗಳಿಗೆ ನಾಟಕದ ಕಲ್ಪನೆ ಮುಡಿಸುವುದು ತಮಾಷೆಯಲ್ಲ. ಇದಕ್ಕೆ ಸಮರ್ಥವಾಗಿ ದುಡಿದವರು ನಮ್ಮ ಶಿಕ್ಷಕವರ್ಗ. ಸುಷ್ಮಾ, ಬೃಂದಾ, ಕಶ್ಯಪ್, ಶೋಭಾ... Continue Reading →

ಮಕ್ಕಳ ರಂಗ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ೧೮/೪/೨೦೧೪ ರಂದು ಸಂಜೆ ೬ಕ್ಕೆ ಶ್ರೀ ಮಾ|| ಹಿರಣ್ಣಯ್ಯ ರವರು ಜಂಬೆ ಬಾರಿಸುವ ಮೂಲಕ ಚಾಲನೆ ನೀಡಿದರು. ವಿಜಯನಗರಬಿಂಬದ ೧೯ನೇ ವರ್ಷದ ಬೇಸಿಗೆಯ ಮಕ್ಕಳ ರಂಗ ತರಬೇತಿ ಕಾರ್ಯಾಗಾರವು ೧೮/೪/೨೦೧೪ ರಿಂದ ೪/೫/೨೦೧೪ ರವರೆಗೆ ನಡೆಯಲಿದ್ದು, ಪ್ರತಿ ದಿನ ಬೆಳಗ್ಗೆ ೯;೩೦ ಇಂದ ಸಂಜೆ ೪;೩೦ ರವರಗೆ ಮಕ್ಕಳಿಗೆ ರಂಗಭೂಮಿಯ ವಿವಿಧ ಪ್ರಾಕಾರಗಳ ತರಗತಿಯನ್ನು ನಡೆಸಲಾಗುತ್ತದೆ. ನಟನೆ,ಹಾಡು,ಚಿತ್ರಕಲೆ,ಕ್ರಾಫ್ಟ್, ರಂಗಾಟಗಳು - ಇವುಗಳ ಜೊತೆಗೆ ಮಕ್ಕಳ ಕವಿಮೇಳ- ಚಿಲಿಪಿಲಿ, ಮೀಡಿಯಾ ಹಬ್ಬ,... Continue Reading →

ತಾಲೀಮು… ತಾಲೀಮು….. ತಾಲೀಮು

ಡಿಸೆಂಬರ್, 22, 2013 - ನಮ್ಮ ಸಂಸ್ಥಾಪಕರಾದ ಎ.ಎಸ್. ಮೂರ್ತಿ ಯವರ ನೆನಪಿನಲ್ಲಿ ಕಲೋತ್ಸವ.... ಅದರಲ್ಲಿ ನಮ್ಮ ವಿದ್ಯಾರ್ಥಿಗಳಿಂದ ಬೀದಿ ನಾಟಕ ಮತ್ತು ರಂಗ ಗೀತೆ ದೃಶ್ಯಾವಳಿ.. ಅದರ ತಾಲೀಮು. ಜನವರಿ,5, 2014 - ನಾಟಕ ಬೆಂಗಳೂರು - ರವೀಂದ್ರ ಕಲಾಕ್ಷೇತ್ರ - 50 ನಾಟಕೋತ್ಸವದಲ್ಲಿ ಶುದ್ಧಗೆ ನಾಟಕ. ಅದರ ತಾಲೀಮು. ಜನವರಿ, 17, 2014 -  ನಮ್ಮ ರಂಗ ಶಿಕ್ಷಣ ಕೇಂದ್ರದ ಮಕ್ಕಳ ವಿಭಾಗದ ವಿದ್ಯಾರ್ಥಿಗಳಿಂದ ಎರಡು ಪ್ರಯೋಗಗಳು ಅದರ ತಾಲೀಮು..... ಒಟ್ಟು 5  ಹೊಸ... Continue Reading →

ಜೊತೆಯಾದರು ಲಂಕೇಶ್, ಕರಂತ್, ಏ.ಎಸ್.ಎಂ

ನಮ್ಮಲ್ಲಿ ಈ ಸಾಲಿನಲ್ಲಿ ಇರುವ 9 ತಂಡಗಳ ಹೆಸರು ಇಂತಿವೆ. ಶೂದ್ರಕ, ನಾಗರತ್ನಮ್ಮ , ಏ.ಎಸ್.ಎಮ್ , ಲಂಕೇಶ್, ಕೀ.ರಂ, ಪರ್ವತವಾಣಿ,  ಬಿ.ವಿ. ಕಾರಂತ,  ರವೀಂದ್ರನಾಥ ಟ್ಯಾಗೊರ್, ಮತ್ತು ಬಾದಲ್ ಸರ್ಕಾರ್ ಒಂದು ತಂಡ ರಚಿಸಿದ ಚಿತ್ರಕ್ಕೆ ಮತ್ತೊಂದು ತಂಡ ಕಥೆ ಕಟ್ಟಿದೆ.  ಹೀಗೆ 9 ಚಿತ್ರಗಳು ಮತ್ತು ಅವುಗಳಿಂದ ಪ್ರೇರಿತವಾದ 9 ಕಥೆಗಳು   ಕ‌ಥೆಗಳ ಹಬ್ಬದಲ್ಲಿ ಪ್ರದರ್ಶನಗೊಂಡವು. ಚಿತ್ರರಚಿಸಿದ ತಂಡ.   - ಕಥೆ ರಚಿಸಿದ ತಂಡ 1. ಕಿ.ರಂ.                       ನಾಗರತ್ನಮ್ಮ 2. ಶೂದ್ರಕ.                    ಏ.ಎಸ್.ಎಂ 3.... Continue Reading →

Powered by WordPress.com.

Up ↑