ಮೊದಲಿಗರೆಂಬ ಹೆಮ್ಮ

ಕನ್ನಡ ರಂಗಭೂಮಿಯಲ್ಲಿ ಮೊಟ್ಟ ಮೊದಲ ಬಾರಿಗೆ ಹೊಸದೊಂದು ಪ್ರಯೋಗ ಮಾಡಿದ ಹೆಮ್ಮೆ ಇದೆ. ಅದೇನೆಂದಿರಾ ಅದೇ " ಒಂದು ನಿಮಿಷದ ಸಿಗ್ನಲ್ ನಾಟಕ ". ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಾಗ ಯಾವಾಗ ಹಸಿರ ನಿಶಾನೆ ಬರುವುದೊ ಎಂದು ಹಪಹಪಿಸುತ್ತದೆ ಎಲ್ಲರ ಮನಸ್ಸು. ಅಂತಹ ಸಮಯದಲ್ಲಿ ಪೆಡೆಸ್ಟ್ರಿಯನ್ ಕ್ರಾಸಿಂಗ್ ನಲ್ಲಿ ಏನಾದರೂ ಸಂಭವಿಸಿದರೆ ಎಲ್ಲಿ ಟ್ರಾಫಿಕ್ ಜಾಮ್ ಆಗುವುದೊ ಎಂದು ತವಕಿಸುತ್ತಾರೆ ವಾಹನ ಸವಾರರು . ಇಂಥ ಸನ್ನಿವೇಶದಲ್ಲಿ ತಮಟೆ ಹೊಡೆದು ನಾಟಕ ನಾಟಕ ಎಂದು ಕೂಗುತ್ತ ನಟವರ್ಗ... Continue Reading →

ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ “ರಂಗ ಚಿಂತನ- 2018 “

ನ ಮ್ಮ ಕೇಂದ್ರವು ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ "ರಂಗ ಚಿಂತನ- 2018 “ ಎಂಬ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದ್ದೇವೆ. ಈ ವಿಚಾರ ಸಂಕಿರಣದ ಮಹತ್ಯವೇನೆಂದರೆ ಇಲ್ಲಿ ವಿಷಯ ಮಂಡನೆ ಮಾಡುವವರು ನಮ್ಮ ಕೇಂದ್ರದಲ್ಲೇ ಅಧ್ಯಯನ ಮಾಡಿ , ತದನಂತರ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಈಗಲೂ ರಂಗಭೂಮಿಯಲ್ಲಿ ನಿರಂತರವಾಗಿ ದುಡಿಯುತ್ತಿರುವ ರಂಗಕಮಿ೯ಗಳು, ರಂಗ ತಂತ್ರಜ್ಞರು ಎಂದು ಹೇಳಲು ಹೆಮ್ಮೆಯಾಗುತ್ತದೆ. ಈ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಖ್ಯಾತ ಬರಹಗಾರರು, ಅಂಕಣಕಾರರಾದ ಸಂಧ್ಯಾರಾಣಿಯವರು ವಹಿಸಿಕೊಳ್ಳಲಿದ್ದಾರೆ. ಈ ಕಾಯ೯ಕ್ರಮದ ವಿವರ ಈ ಕೆಳಗಿನಂತೆ... Continue Reading →

ದೀಪಾವಳಿ ಅಭಿ ಬಾಕಿ ಹೆ ಮೇರೆ ದೋಸ್ತ್..

ವಿಜಯನಗರ ಬಿಂಬ (ರಿ) ರಂಗಶಿಕ್ಷಣ ಕೇಂದ್ರ ಮಕ್ಕಳ ವಿಭಾಗ ಅರ್ಪಿಸುವ ಚಿನಕುರಳಿ ಮಕ್ಕಳ ಕಿರು ನಾಟಕೋತ್ಸವ 2017 ಇಂದಿನ ಮಕ್ಕಳು ಇಂದಿನ ಪ್ರಜೆಗಳು ಎಂದು ನಂಬಿರುವ ಸಂಸ್ಥೆ ವಿಜಯನಗರ ಬಿಂಬ , ಅದಕ್ಕೆ ಸಾಕ್ಷಿಯಾಗಿದೆ ಈ ಕಿರು ನಾಟಕೋತ್ಸವ . ನಾಟಕ ಬರೆದು ನಿದೇ೯ಶಿಸಲು ಉತ್ಸಕರಾಗಿರುವ ಮಕ್ಕಳ ದೊಡ್ಡ ರಂದು ವಿಜಯನಗರ ಬಿಂಬದಲ್ಲಿದೆ. ಆದರೆ ಪ್ರತಿಯೊಬ್ಬರಿಗೂ ಅವಕಾಶ ಕೊಟ್ಟರೆ " ಎಲ್ಲಾ ಹಾಡುವ ಬಾಯೇ ಆದರೆ ಚಪ್ಪಾಳೆಗೆ ಜನ ಇನ್ನೆಲ್ಲಿ " ಎನ್ನುವಂತೆ ಆಗಬಾರದು . ಆದ್ದರಿಂದಲೇ... Continue Reading →

ಚಿನಕುರಳಿಗಳ ಹಾವಳಿ

ದೀಪಾವಳಿಯ ಸಡಗರದಲ್ಲಿ ಮತ್ತೊಂದು ಉಲ್ಲಾಸಕರ ಅಂಶವೆಂದರೆ ವಿಜಯನಗರ ಬಿಂಬದಲ್ಲಿ ಭರದಿಂದ ಸಾಗಿದೆ ಚಿನಕುರಳಿ ನಾಟಕೋತ್ಸವದ ತಯಾರಿ. ಮಕ್ಕಳ ನಾಟಕ ಬರೆದು, ಅವರೆ ನಿದೇ೯ಶನ ಮಾಡಿ , ಅವರೇ ತಾಲೀಮು ಮಾಡಲು ತಾಲೀಮು ಕೊಠಡಿಯನ್ನು ಕಾಯ್ದಿರಿಸುವುದು, ಅತಿಥಿಗಳನ್ನು ತಾವೇ ಕರಿಯುವುದು ಮುಂತಾದ ನಟನೆಯಲ್ಲದೆ ನಾಟಕೋತ್ಸವವನ್ನು ಆಯೋಜಿಸುವ ಎಲ್ಲ ಹೊಣೆ ಹೊತ್ತಿದ್ದಾರೆ ಚಿಣ್ಣರು. ಹಾಗಾಗಿ ಚಿನಕುರಳಿ ನಾಟಕೋತ್ಸವ ಬಹಳ ಮಹತ್ವದ್ದಾಗಿದೆ. ಮಕ್ಕಳ ಆಲೋಚನೆಗಳಿಗೆ ಹಿಡಿದ ಕನ್ನಡಿ ಈ ಚಿನಕುರಳಿ ನಾಟಕೋತ್ಸವ. ಇದೇ ಅಕ್ಟೋಬರ್ 27, 28, 29, 2017 ಅಂದರೆ... Continue Reading →

ಬಣ್ಣಗಳು ಮಾತನಾಡುವಾಗ…

ಲೇಖನಿಯಿಂದ 🙂

ಹಾಳೆಯ ಮೇಲೆ ಬಣ್ಣ ಹಚ್ಚುವುದು ‘ಚಿತ್ರಕಲೆ’ ಆದರೆ, ಅದೇ ಹಾಳೆಯ ಮೇಲೆ ಪದಗಳು ಬರೆದರೆ ಅದು ಕಥೆಯಾಗುತ್ತದೆ. ಆದರೆ ಹಚ್ಚಿರುವ ಬಣ್ಣಕ್ಕೆ ಪದ ನೀಡುವುದೇ…..”ಚಿತ್ರಕಥನ”
ಒಂದು ಚಿತ್ರಕಲೆಯನ್ನು ಒಬ್ಬ ಒಂದು ರೀತಿಯಲ್ಲಿ ನೋಡಿದರೆ, ಮತ್ತೊಬ್ಬ ಅದೇ ಚಿತ್ರಕಲೆಯನ್ನು ಇನ್ನೊಂದು ರೀತಿಯಲ್ಲಿ ನೋಡುವನು. ಅದೇ ಚಿತ್ರಕಲೆಯ ವಿಶೇಷತೆ. ಒಂದು ಕಥೆಯನ್ನು ಓದಿದಾಗ ಬೇರೆ ಬೇರೆ ಅರ್ಥ ಅಡಗಿರುತ್ತದೆ, ಅದು ಓದುಗನ ಮನೋಧರ್ಮ ಅಥವ ಅವನ ಸುತ್ತಲಿನ ಪರಿಸರದ ಮೇಲೆ ಅವಲಂಬಿತವಾಗಿದ್ದು ಈ ಅಂಶಗಳ ಮೇಲೆ ಅವನ ಅರ್ಥ ನಿಂತಿರುತ್ತದೆ.
ಈ ಚಿತ್ರಕಥನದಲ್ಲಿ ಪದಗಳಿಗೆ ಬಣ್ಣಗಳ ಭಾವನೆಯನ್ನು, ಬಣ್ಣಗಳಿಗೆ ಪದಗಳ ಸೊಬಗನ್ನು ನೀಡುತ್ತೇವೆ. ಇದು ಚಿತ್ರಕಲೆ ಮತ್ತು ಬರವಣಿಗೆಯ ಬೆಸುಗೆ.
ಎಲ್ಲಾ ವಿದ್ಯಾರ್ಥಿಗಳನ್ನು ತಂಡಗಳಾಗಿ ವಿಂಗಡಿಸಿ, ಎಲ್ಲಾ ತಂಡಗಳಿಗೆ ಒಂದು ದೊಡ್ಡ ವರ್ಣಚಿತ್ರವನ್ನು ಸೃಷ್ಟಿಸಬೇಕೆನ್ನುತ್ತಾರೆ. ನಂತರ ಒಂದು ತಂಡ ರಚಿಸಿದ ಚಿತ್ರವನ್ನು ಇನ್ನೊಂದು ತಂಡಕ್ಕೆ ಕೊಟ್ಟು ಆ ಚಿತ್ರದ ಮೇಲೆ ತಮ್ಮ ಸೃಜನಶೀಲತೆಯನ್ನು ಉಪಯೋಗಿಸಿಸಿ, ಮನಸ್ಸನ್ನು ಒಂದು ಕಥಾ ಲೋಕದಲ್ಲಿ ಮುಳುಗುವ ಹಾಗೆ ಮಾಡುತ್ತಾರೆ. ಆ ಕಥಾಲೋಕದ ಒಡೆಯನಾದ ಕಥೆತಾತ ಕಾಣದ ಕೋಣೆಯಲಿ ನಿಂತು ವಿದ್ಯಾರ್ಥಿಗಳೆಲ್ಲರಿಗೂ ಕಥೆ ಕಟ್ಟುವುದು ಹೇಗೆ, ಕಟ್ಟಿದ ಕಥೆಯನ್ನು ವಿವರಿಸುವುದು ಹೇಗೆ ಎಂದು ಕಲಿಸುತ್ತಾ ಮಾರ್ಗದರ್ಶಿಯಾಗಿ ನಿಲ್ಲುತ್ತಾನೆ.
ಕಟ್ಟಿರುವ ಕಥೆಯನ್ನು “ಚಿತ್ರಕಥನ” ಎಂಬ ಕಾರ್ಯಕ್ರಮದ ಮುಖಾಂತರ ಜನರಿಗೆ  ವಿದ್ಯಾರ್ಥಿಗಳು ಹೇಳುತ್ತಾರೆ. ಇದು ನಮ್ಮ ವಿಜಯನಗರ ಬಿಂಬದ ಶನಿವಾರದ ರಂಗಶಾಲೆಯ ಮೊದಲ ಕಾರ್ಯಕ್ರಮ.
ಕೇವಲ ಮನರಂಜನೆಗೆ ಸೀಮಿತವಾದ ಕಥೆಗಳಲ್ಲದೆ, ನೀತಿಪಾಠ ಉಳ್ಳ ಕಥೆಗಳನ್ನು ರಚಿಸಿ ಪ್ರದರ್ಶಿಸಲಾಗುತ್ತದೆ. ಈ ಕಥೆಗಳು, ಸಾಮಾನ್ಯ ಮನುಷ್ಯ ಸಮಾಜದಲ್ಲಿ ಹೇಗಿರಬೇಕು ಎನ್ನುತ್ತವೆ. ಅವನು…

View original post 193 more words

ಪುಟಾಣಿ ಅಮೃತಾಳ ಪುಟಾಣಿ ಲೇಖನ :)

‘ಗೋವಿನ ಹಾಡು’ ಯಾರಿಗೆ ತಾನೇ ಗೊತ್ತಿಲ್ಲ? ಎಲ್ಲಾ ವಯಸ್ಸಿನವರು ಅವರವರ ಪ್ರೈಮರಿ ಸ್ಕೂಲಲ್ಲಿ ಇದನ್ನು ಹಾಡಿನ ರೂಪದಲ್ಲಿ ಕಲಿತೇ ಇರುತ್ತಾರೆ. ನನಗೂ ನಮ್ಮಮ್ಮ ಅಪ್ಪ ಈ ಕಥೆನಾ ಎರಡ್ಮೂರು ಸಲ ಹೇಳಿದ್ದರು. ನಾನೂ ಕೇಳಿ ಮರೆತುಬಿಟ್ಟಿದ್ದೆ. ಆದರೆ … Source: ಪುಟಾಣಿ ಅಮೃತಾಳ ಪುಟಾಣಿ ಲೇಖನ 🙂

ಮೊಬೈಲ್ ಹಿಡಿದಾಗ ವಾಕವ್ವ ನೆನಪಾಗುತ್ತಳೆ…. ಸುಮಂತ

ವಾಕವ್ವ- ಇದು ಡಾ|| ಎಸ್. ವಿ. ಕಶ್ಯಪ್ ರವರು ರಚಿಸಿರುವಂತಹ ನಾಟಕ. ಈ ನಾಟಕವು ಜನವರಿ 17 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು. ಸಂವಹನದ ಮಹತ್ವವನ್ನು ಕುರಿತು ರಚಿಸಲ್ಪಟ್ಟಿರುವ ಈ ನಾಟಕ, ಯಂತ್ರಗಳು ಹಾಗು ಅಂತರ್ಜಲಗಳಿ… Source: ಮೊಬೈಲ್ ಹಿಡಿದಾಗ ವಾಕವ್ವ ನೆನಪಾಗುತ್ತಳೆ.... ಸುಮಂತ

ಸುಹಾಸನ ’ವಾಕವ್ವ’

ಲೇಖನಿಯಿಂದ 🙂

” ಹೇ… ಎಲ್ಲಾ ’ವಾಕವ್ವ’ ನೋಡೋಕೆ ಬನ್ರೋ” ಎಂದು ನಾನು ಸ್ಕೂಲ್ನಲ್ಲಿ ಎಲ್ರಿಗೂ ಹೇಳಿದಾಗ ಅವರು “ಹಾಗಂದ್ರೇನು?” ಎಂದು ಕೇಳಿದರು. ಯಾರಿಗೂ, ಆ ಪೋಸ್ಟರ್ ನೋಡ್ದಾಗ, ಚದುರಂಗಕ್ಕು, ’ವಾಕವ್ವ’ಗೂ ಸಂಬಂಧವೇ ತಿಳೀತಿರ್ಲಿಲ್ಲ. ನನಗೂ ಸಹ ಮೊದಮೊದಲು ಟೈಟಲ್ ಕೇಳ್ದಾಗ ” ಏನು… ಏನಿರಬಹುದು” ಅಂತ ಅನ್ಸಿತ್ತು. ಆದರೆ, ಚದುರಂಗದೊಡನೆ ವಾಕವ್ವಳ ಸಂಬಂಧ ಅರಿತಾಗ, ನಾನೂ ಬೆಚ್ಚಿದ್ದೆ- ಕುತೂಹಲಕಾರಿಯಾದೆ

ಬೋರ್ಡ್ ಗೇಮ್ ಗಳ ಲೋಕಕ್ಕೆ ನಮ್ಮ ನಿರ್ದೇಶಕರಾದ ಕಶ್ಯಪ್ ಅವರು ನಮ್ಮನ್ನು ಕರೆದುಕೊಂಡು ಹೋಗಿ, ಚದುರಂಗದೂರಿನಲಿ ನಡೆಯಬಹುದಾದ ಒಂದು ಸಣ್ಣ ಕಥೆಯನ್ನು ಕಲ್ಪಿಸಿಕೊಂಡು, ಈ ನಾಟಕದಲ್ಲಿ ಹೇಳ್ತಾರೆ. ಚದುರಂಗದೂರಿನಲಿ, ಮಾತಿನ ಬಗ್ಗೆ, ಮಾತಿನ ಮಹತ್ವದ ಬಗ್ಗೆ ವಾಕವ್ವ ಮಾತಾಡ್ತಿರ್ತಾಳೆ. ಆದರೆ, ಚದುರಂಗದೂರಿನವರೇ, ಮಾತಿಗೆ ಮಹತ್ವ ಕೊಡದೇ, ಯಂತ್ರಗಳಲ್ಲಿ ಮಗ್ನರಾದಾಗ, ವಾಕವ್ವನ ಅಸ್ತಿತ್ವದೊಡನೆ ಅವಳೂ ಕಳೆದುಹೋಗುತ್ತಾಳೆ. ಚಂದದ ಚದುರಂಗದೂರು ಚದುರಿಹೋಗುತ್ತದೆ.

ಎಲ್ಲರೂ ಯಂತ್ರದ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಆದರೆ, ಗುಗ್ಗಯ್ಯ, ಎಲ್ಲರನ್ನು ಒಂದಾಗಿಸಲು, ವಾಕವ್ವಳನ್ನು ಹುಡುಕಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾನೆ. ಯಾರೂ ಸಹಕಾರ ನೀಡದಿದ್ದರೂ ತಾನೊಬ್ಬನೇ ವಾಕವ್ವಳನ್ನು ಹುಡುಕಲು ಗುಗ್ಗಯ್ಯ ಯಶಸ್ವಿಯಾಗುತ್ತಾನೆ.  ಹುಷಾರಿಲ್ಲದ ವಾಕವ್ವ, ಗುಗ್ಗಯ್ಯನಿಗೆ- ಆಗಿರುವ ಸಮಸ್ಯೆಗೆ ಪರಿಹಾರವನ್ನು ತಿಳಿಸುತ್ತಾಳೆ. ಆ ಪರಿಹಾರದಂತೆ ನಡೆದುಕೊಳ್ಳುವ ಗುಗ್ಗಯ್ಯ ಎಲ್ಲರ ಮಾತನ್ನೂ ಸರಿ ಮಾಡುತ್ತಾನೆ, ಮತ್ತೆ ಚದುರಂಗದೂರು ಒಂದಾಗುತ್ತದೆ. ನಾಟಕದಲ್ಲಿ ತೋರಿಸಲಾದ ಆ ಸಮಸ್ಯೆ  ಈಗಿನ ಸಮಾಜದಲ್ಲಿ ಎಲ್ಲೆಲ್ಲೂ ಕಾಣಬಹುದು ಹಾಗು ಅದನ್ನು ಬಗೆಹರಿಸುವ ರೀತಿ ಕೂಡಾ ಒಳ್ಳೆಯ ಮಜಾ ನೀಡುತ್ತದೆ.

ಈ ನಾಟಕ, ನಮಗೆ ಮಾತಿನ ಮಹತ್ವದ ಬಗ್ಗೆ ತಿಳಿಸಿಕೊಟ್ಟಿದೆ. ನಿಧಾನವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಲು ಆರಂಭಿಸಿರುವ ನಾವುಗಳೂ, ಈ…

View original post 29 more words

Website Powered by WordPress.com.

Up ↑