ಪುಟಾಣಿ ಅಮೃತಾಳ ಪುಟಾಣಿ ಲೇಖನ :)

‘ಗೋವಿನ ಹಾಡು’ ಯಾರಿಗೆ ತಾನೇ ಗೊತ್ತಿಲ್ಲ? ಎಲ್ಲಾ ವಯಸ್ಸಿನವರು ಅವರವರ ಪ್ರೈಮರಿ ಸ್ಕೂಲಲ್ಲಿ ಇದನ್ನು ಹಾಡಿನ ರೂಪದಲ್ಲಿ ಕಲಿತೇ ಇರುತ್ತಾರೆ. ನನಗೂ ನಮ್ಮಮ್ಮ ಅಪ್ಪ ಈ ಕಥೆನಾ ಎರಡ್ಮೂರು ಸಲ ಹೇಳಿದ್ದರು. ನಾನೂ ಕೇಳಿ ಮರೆತುಬಿಟ್ಟಿದ್ದೆ. ಆದರೆ … Source: ಪುಟಾಣಿ ಅಮೃತಾಳ ಪುಟಾಣಿ ಲೇಖನ 🙂

ಮೊಬೈಲ್ ಹಿಡಿದಾಗ ವಾಕವ್ವ ನೆನಪಾಗುತ್ತಳೆ…. ಸುಮಂತ

ವಾಕವ್ವ- ಇದು ಡಾ|| ಎಸ್. ವಿ. ಕಶ್ಯಪ್ ರವರು ರಚಿಸಿರುವಂತಹ ನಾಟಕ. ಈ ನಾಟಕವು ಜನವರಿ 17 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು. ಸಂವಹನದ ಮಹತ್ವವನ್ನು ಕುರಿತು ರಚಿಸಲ್ಪಟ್ಟಿರುವ ಈ ನಾಟಕ, ಯಂತ್ರಗಳು ಹಾಗು ಅಂತರ್ಜಲಗಳಿ… Source: ಮೊಬೈಲ್ ಹಿಡಿದಾಗ ವಾಕವ್ವ ನೆನಪಾಗುತ್ತಳೆ.... ಸುಮಂತ

ಸುಹಾಸನ ’ವಾಕವ್ವ’

ಲೇಖನಿಯಿಂದ 🙂

” ಹೇ… ಎಲ್ಲಾ ’ವಾಕವ್ವ’ ನೋಡೋಕೆ ಬನ್ರೋ” ಎಂದು ನಾನು ಸ್ಕೂಲ್ನಲ್ಲಿ ಎಲ್ರಿಗೂ ಹೇಳಿದಾಗ ಅವರು “ಹಾಗಂದ್ರೇನು?” ಎಂದು ಕೇಳಿದರು. ಯಾರಿಗೂ, ಆ ಪೋಸ್ಟರ್ ನೋಡ್ದಾಗ, ಚದುರಂಗಕ್ಕು, ’ವಾಕವ್ವ’ಗೂ ಸಂಬಂಧವೇ ತಿಳೀತಿರ್ಲಿಲ್ಲ. ನನಗೂ ಸಹ ಮೊದಮೊದಲು ಟೈಟಲ್ ಕೇಳ್ದಾಗ ” ಏನು… ಏನಿರಬಹುದು” ಅಂತ ಅನ್ಸಿತ್ತು. ಆದರೆ, ಚದುರಂಗದೊಡನೆ ವಾಕವ್ವಳ ಸಂಬಂಧ ಅರಿತಾಗ, ನಾನೂ ಬೆಚ್ಚಿದ್ದೆ- ಕುತೂಹಲಕಾರಿಯಾದೆ

ಬೋರ್ಡ್ ಗೇಮ್ ಗಳ ಲೋಕಕ್ಕೆ ನಮ್ಮ ನಿರ್ದೇಶಕರಾದ ಕಶ್ಯಪ್ ಅವರು ನಮ್ಮನ್ನು ಕರೆದುಕೊಂಡು ಹೋಗಿ, ಚದುರಂಗದೂರಿನಲಿ ನಡೆಯಬಹುದಾದ ಒಂದು ಸಣ್ಣ ಕಥೆಯನ್ನು ಕಲ್ಪಿಸಿಕೊಂಡು, ಈ ನಾಟಕದಲ್ಲಿ ಹೇಳ್ತಾರೆ. ಚದುರಂಗದೂರಿನಲಿ, ಮಾತಿನ ಬಗ್ಗೆ, ಮಾತಿನ ಮಹತ್ವದ ಬಗ್ಗೆ ವಾಕವ್ವ ಮಾತಾಡ್ತಿರ್ತಾಳೆ. ಆದರೆ, ಚದುರಂಗದೂರಿನವರೇ, ಮಾತಿಗೆ ಮಹತ್ವ ಕೊಡದೇ, ಯಂತ್ರಗಳಲ್ಲಿ ಮಗ್ನರಾದಾಗ, ವಾಕವ್ವನ ಅಸ್ತಿತ್ವದೊಡನೆ ಅವಳೂ ಕಳೆದುಹೋಗುತ್ತಾಳೆ. ಚಂದದ ಚದುರಂಗದೂರು ಚದುರಿಹೋಗುತ್ತದೆ.

ಎಲ್ಲರೂ ಯಂತ್ರದ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಆದರೆ, ಗುಗ್ಗಯ್ಯ, ಎಲ್ಲರನ್ನು ಒಂದಾಗಿಸಲು, ವಾಕವ್ವಳನ್ನು ಹುಡುಕಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾನೆ. ಯಾರೂ ಸಹಕಾರ ನೀಡದಿದ್ದರೂ ತಾನೊಬ್ಬನೇ ವಾಕವ್ವಳನ್ನು ಹುಡುಕಲು ಗುಗ್ಗಯ್ಯ ಯಶಸ್ವಿಯಾಗುತ್ತಾನೆ.  ಹುಷಾರಿಲ್ಲದ ವಾಕವ್ವ, ಗುಗ್ಗಯ್ಯನಿಗೆ- ಆಗಿರುವ ಸಮಸ್ಯೆಗೆ ಪರಿಹಾರವನ್ನು ತಿಳಿಸುತ್ತಾಳೆ. ಆ ಪರಿಹಾರದಂತೆ ನಡೆದುಕೊಳ್ಳುವ ಗುಗ್ಗಯ್ಯ ಎಲ್ಲರ ಮಾತನ್ನೂ ಸರಿ ಮಾಡುತ್ತಾನೆ, ಮತ್ತೆ ಚದುರಂಗದೂರು ಒಂದಾಗುತ್ತದೆ. ನಾಟಕದಲ್ಲಿ ತೋರಿಸಲಾದ ಆ ಸಮಸ್ಯೆ  ಈಗಿನ ಸಮಾಜದಲ್ಲಿ ಎಲ್ಲೆಲ್ಲೂ ಕಾಣಬಹುದು ಹಾಗು ಅದನ್ನು ಬಗೆಹರಿಸುವ ರೀತಿ ಕೂಡಾ ಒಳ್ಳೆಯ ಮಜಾ ನೀಡುತ್ತದೆ.

ಈ ನಾಟಕ, ನಮಗೆ ಮಾತಿನ ಮಹತ್ವದ ಬಗ್ಗೆ ತಿಳಿಸಿಕೊಟ್ಟಿದೆ. ನಿಧಾನವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಲು ಆರಂಭಿಸಿರುವ ನಾವುಗಳೂ, ಈ…

View original post 29 more words

Website Powered by WordPress.com.

Up ↑