2014-15 ಸಾಲಿನ ಮಕ್ಕಳ ವಿಭಾಗದಿಂದ ಎರಡು ಹೊಸ ನಾಟಕಗಳು

ಜನವರಿ 11 , 2015 ರಂದು ಎ.ಡಿ.ಎ ರಂಗಮಂದಿರದಲ್ಲಿ ಈ ಸಾಲಿನ ಎರಡು ಹೊಸ ನಾಟಕಗಳನ್ನು ಆಯೋಜಿಸಲಾಗಿತ್ತು. ಹೊತ್ತಿಗೆಯ ಹೊತ್ತು (ರಚನೆ, ನಿರ್ದೇಶನ - ಡಾ||ಎಸ್.ವಿ.ಕಶ್ಯಪ್) ಕಾಡ್ನಲ್ಲೊಂದೂರಿತ್ತಂತೆ ( ರಚನೆ, ನಿರ್ದೇಶನ - ಶೈಲೇಶ್ ಕುಮಾರ್) ಅಲ್ಲದೆ ಈ ಸಾಲಿನ ಚಿತ್ರಕಥನ ಮತ್ತು ಬೊಂಬೆ ಹಬ್ಬದ ಕತೆಗಳು, ನಾಟಕಗಳು ಮತ್ತು ಚಿತ್ರಗಳಿರುವ ಪದಚಿತ್ತಾರ ವನ್ನು ಬಿಡುಗಡೆ ಮಾಡಲಾಯ್ತು. ಹಿರಿಯ ಸಾಹಿತಿಗಳು, ವಿಮರ್ಶಕರು  ಆದ ಎಂ.ಎಚ್.ಕೃಷ್ಣಯ್ಯ ಅವರು ಎರಡು ನಾಟಕಗಳನ್ನು ಪ್ರಶಂಶಿಸಿದರು. ಈ ಟಿ.ವಿ ನ್ಯೂಸ್ ಕನ್ನಡ ವಾಹಿನಿಯ... Continue Reading →

ಶಿವಮೊಗದ ಸಹ್ಯಾದ್ರಿ ನಾಟಕೋತ್ಸವ ದಲ್ಲಿ ಶುದ್ಧಗೆ

ಶಿವಮೊಗ ದಲ್ಲಿ ನಡೆದ ಸಹ್ಯಾದ್ರಿ ನಾಟಕೋತ್ಸವದಲ್ಲಿ ಶುದ್ಧಗೆ ಪ್ರದರ್ಶನವಾಗಿ ತುಂಬಿದ ರಂಗಮಂದಿರದ ಪ್ರಶಂಸೆಗೆ ಪಾತ್ರವಾಯ್ತು . ಸಹ್ಯಾದ್ರಿ ಕಲಾ ತಂಡದ ಶ್ರೀ ಲವ ಅವರಿಗೆ, ಶ್ರೀ. ಸುರೇಶ (ಚಿಕ್ಕ) ಅವರಿಗೆ, ಕನ್ನಡ ಸಂಸ್ಕೃತಿ ಇಲಾಖೆಗೆ, ಮತ್ತು ಶಿವಮೊಗದ ಎಲ್ಲ ರಂಗಾಸಕ್ತರಿಗೆ ಧನ್ಯವಾದಗಳು.

ಒಂದರ ಮೇಲೊಂದು ಚಟುವಟಿಕೆಗಳಿಂದ ಗಿಜಿಗುಡುತ್ತಿದೆ ವಿಜಯನಗರ ಬಿಂಬ

ವಿಜಯನಗರ ಬಿಂಬದ ಅಂಗಳದಲ್ಲಿ ಆಗಸ್ಟ್ 9 ಮತ್ತು 10 ಚಿತ್ರಕಥನ ನಡೆಯಿತು. ಉದ್ಘಾಟಿಸಿ ಮಾತನಾಡಿದ ಖ್ಯಾತ ಎಂ.ಎಸ್. ಮೂರ್ತಿ ನಮ್ಮ ಮಕ್ಕಳ ಚಿತ್ರಕಥನ ವೀಕ್ಷಿಸಿ ಹೀಗೆಂದರು " Ways of seeing an artwork ಬಹಳ ಮುಖ್ಯ, ಇಲ್ಲದಿದ್ದರೆ ಕಲಾವಿದರ ಶ್ರಮ ವ್ಯರ್ಥವಾಗುತ್ತದೆ. ಸೃಜನಶೀಲ ಮನಸ್ಸುಗಳನ್ನು ಹುಟ್ಟು ಹಾಕುವ ಕೆಲಸ ವಿಜಯನಗರ ಬಿಂಬ ಮಾಡುತ್ತಿದೆ ಎಂದು ಶ್ಲಾಘಿಸಿದರು. ಅಂದು ಖ್ಯಾತ ನಿರ್ದೇಶಕರಾದ ಋತ್ವಿಕ್ ಸಿಂಹ ಅವರು ಅತಿಥಿಯಾಗಿದ್ದರು. ಎರಡನೇ ದಿನ ಖ್ಯಾತ ಕವಯಿತ್ರಿ ರಂಜನಿ ಪ್ರಭು ಅವರು... Continue Reading →

ಬಣ್ಣದ ಐಡಿಯಾ !!

ಚಿಣ್ಣರೆಲ್ಲ ಒಟ್ಟುಗೂಡಿ ಬಣ್ಣಗಳ ಜೊತೆಗೆ ಆಡಿ ಚಿತ್ರಗಳು ಬಂದವು ಚಿತ್ರಮುಂದೆ ಇಟ್ಟುಕೊಂಡು ಅದರೊಳಗೊಂದು ಲಹರಿ ಕಂಡು ಕಥೆಗಳು ನಿಂದವು ಕಂಡದ್ದನ್ನು ಮತ್ತೆ ಮುಟ್ಟಿ ಕಥನವಾಗಿ ಅದನ ಕಟ್ಟಿ ಹಬ್ಬಗಳು ಬಂದವು ಹೌದು ಚಿತ್ರಕಥನ ನಡೆಯುವ, ಆ ಎರಡು ದಿನ ಹಬ್ಬವೇ ಹೌದು.. ನಮ್ಮ ಈ ಸಂಭ್ರಮದಲ್ಲಿ ಭಾಗಿಯಾಗಲು ಗಣ್ಯರು ಒಪ್ಪಿದ್ದಾರೆ 9 ಆಗಸ್ಟ್ ಉದ್ಘಾಟನೆ ಮಾಡಲು ಬೈನಾಲೆ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಎಂ.ಎಸ್.ಮೂರ್ತಿ ಅವರು ಆಗಮಿಸಲಿದ್ದಾರೆ.ಅಂದಿನ ಅತಿಥಿಗಳಾಗಿ ವೇದಿಕೆ ತಂಡದ ನಿರ್ದೇಶಕರಾದ ಋತ್ವಿಕ್ ಸಿಂಹ ಅವರು ಆಗಮಿಸಲಿದ್ದಾರೆ... Continue Reading →

ಇನ್ನೊಂದು ಆರಂಭ

ರಂಗ ಕಲಿಕೆಗೆ ಮತ್ತಂದು ಮುನ್ನುಡಿ ಬರೆಯಲು, 2014-15 ಸಾಲಿನ ಡಿಪ್ಲಮಾ ಉದ್ಘಾಟಿಸಲು ಬರುತ್ತಿದ್ದಾರೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಸನ್ಮಾನ್ಯ ಪ್ರೊ||ಎಂ.ಜಿ.ಕೃಷ್ಣನ್ ಹಾಗು ಈ ಟಿವಿ ಕನ್ನಡ ನ್ಯೂಸ್ ಚಾನೆಲ್ ಮುಖ್ಯಸ್ತರಾದ ಶ್ರೀ ಜಿ.ಎನ್.ಮೋಹನ್. ಉದ್ಘಾಟನೆಯ ನಂತರ ಕಳೆದ ಸಾಲಿನ ವಿದ್ಯಾರ್ಥಿಗಳು 'ಮಣ್ಣಿನ ಬಂಡಿ' ನಾಟಕದ ಮೂಲಕ ತಮ್ಮ ರಂಗ ಪಯಣವನ್ನು ಆರಂಭಿಸಲಿದ್ಧಾರೆ. ಸ್ಥಳ - ಸೇವಾಸದನ ದಿನಾಂಕ -30.6.2014 ಸಮಯ - ಸಂಜೆ 6 ಕ್ಕೆ. ಖಂಡಿತಾ ಬನ್ನಿ

ಸಂಸ್ಕೃತ ನಾಟಕಗಳಲ್ಲೇಲ್ಲ ವಿಭಿನ್ನ ಧಾಟಿಯ ನಾಟಕ ಈ ಮೃಚ್ಛಕಟಿಕ. ದಾನಮಾಡಿ ದರಿದ್ರನಾದ ವರ್ತಕ, ಶೀಲವಂತ ಗಣಿಕೆ, ಹೀಗೆ ಈ ನಾಟಕದ ಪಾತ್ರಗಳೂ ವಿಭಿನ್ನ. ಶೂದ್ರಕ ಕವಿಯ ಈ ನಾಟಕವನ್ನು ಹಲವರು ಅನುವಾದಿಸಿದ್ದಾರೆ. ಪ್ರೋ.ಬಿ.ಚಂದ್ರಶೇಖರ್ ಅನುವಾದಿಸಿರುವ ಮಣ್ಣಿನ ಬಂಡಿ ತಯಾರಾಗುತ್ತಿದೆ. ಈ ಸಾಲಿನ ಡಿಪ್ಲೊಮಾ ವಿದ್ಯಾರ್ಥಿಗಳು ಅಭಿನಯಿಸುತ್ತಿದ್ದಾರೆ ಜೂನ್ 30 ರಂದು ಸೇವಾಸದನದಲ್ಲಿ ಪ್ರದರ್ಶಿಸಲಿದ್ದಾರೆ. ಖಂಡಿತಾ ಬನ್ನಿ

ಹೀಗೊಂದು ಪ್ರತಿಕ್ರಿಯೆ .

ವಿಜಯನಗರ ಬಿಂಬದ ಮಕ್ಕಳ ವಿಭಾಗದ ರಂಗಶಾಲೆಯ ಉದ್ಘಾಟನೆಗೆ ಪ್ರೋ . ಜೆ.ಶ್ರಿನಿವಾಸಮೂರ್ತಿ ಮತ್ತು ಸುರೇಶ ಆನಗಳ್ಳಿ ಆಗಮಿಸಿದ್ದರು. ನಮ್ಮ ಸಂಸ್ಥೆಯಬಗ್ಗೆ ಒಳ್ಳೆಯ ಮಾತನಾಡಿದರು. ಬ್ಯಾಲೆ ನೋಡಲು ಬಂದಿದ್ದ ಕೆ.ಎಸ್.ಡಿ.ಎಲ್. ಚಂದ್ರು " ಇಂದು ನಾನು ಬರೆದೆ ಹೋಗಿದ್ದರೆ ತುಂಬಾ ಮಿಸ್ ಮಾಡಿಕೊಳ್ತಾ ಇದ್ದೆ , ಕಾಡೊಡಲ ಹಾಡಿನಲ್ಲಿ ಮಿನುಗಿದ ಪ್ರತಿಭೆ ......ಭೂಮಿ" ಎಂದಿದ್ದರು ಫೇಸ್ಬುಕ್ ನಲ್ಲಿ ಒಂದು ಸ್ಟೇಟಸ್ ಹೀಗಿತ್ತು -" ನಿನ್ನೆ (ದಿನಾಂಕ 7.6.2014 ರಂದು) ಬೆಂಗಳೂರಿನ ಹಂಪಿನಗರದ ಗ್ರಂಥಾಲಯದ ಸಭಾಂಗಣದಲ್ಲಿ 'ವಿಜಯನಗರಬಿಂಬ' ಸಂಸ್ಥೆಯವರು ತಮ್ಮ ವಿದ್ಯಾರ್ಥಿಗಳ... Continue Reading →

ಚಿತ್ತಾರದಲ್ಲೊಂದು ಲಹರಿ.

ಚಿತ್ತಾರದಲ್ಲಿ ಪಟಾಣಿಗಳನ್ನು ಸಂಭಾಲಿಸುವಾಗ ಶಿಕ್ಷಕವರ್ಗದ ಪ್ರತಿಯೊಬ್ಬರೂ ಪ್ರದರ್ಶಕರಾಗಿರಬೇಕು. ಪುಟಾಣಿಗಳ ಪಾಟಿ ಸವಾಲನ್ನು ಎದುರಿಸಲು ಮಾನಸಿಕವಾಗಿ ತಯಾರಾಗುವ ವೇಳೆಗೆ ಪುಟಾಣಿಗಳು ತಮ್ಮ ಮುಗ್ಧ ತರಲೆಗಳಿಂದ ಕೆಲವು ಅಚ್ಚಳಿಯದ ನೆನಪುಗಳನ್ನು ನಮ್ಮ ಮನಸ್ಸಿನ ಮೇಲೆ ಅಚ್ಚೊತ್ತಿದರು. ಇಲ್ಲಿವೆ ಕೆಲವು ಝಲಕ್ ಗಳು. ತರಲೆ ನಂ.1- ಪುಟಾಣಿ ಒಬ್ಬ ತನ್ನ ಹೆಸರನ್ನು ಸುಕೃತ್,  ಸುಹೃತ್, ಸುವ್ರತ್, ಸುವೃತ್, ಸೂರಜ್ ಹೀಗೆ ದಿನಕ್ಕೊಂದರಂತೆ ಬದಲಿಸುತ್ತಿದ್ದ. ಕೊನೆಗೆ ಅಪ್ಲಿಕೇಷನ್ ಫಾರಂ ನೋಡಿ ಅವನ ಹೆಸರು ಸೂರಜ್ ಎಂದು ತೀರ್ಮಾನವಾಯ್ತು.:-) ತರಲೆ ನಂ.2- ಕ್ರಾಫ್ಟ್ ಮಾಡಲು... Continue Reading →

Powered by WordPress.com.

Up ↑