ಸುಹಾಸನ ’ವಾಕವ್ವ’

ಲೇಖನಿಯಿಂದ 🙂

” ಹೇ… ಎಲ್ಲಾ ’ವಾಕವ್ವ’ ನೋಡೋಕೆ ಬನ್ರೋ” ಎಂದು ನಾನು ಸ್ಕೂಲ್ನಲ್ಲಿ ಎಲ್ರಿಗೂ ಹೇಳಿದಾಗ ಅವರು “ಹಾಗಂದ್ರೇನು?” ಎಂದು ಕೇಳಿದರು. ಯಾರಿಗೂ, ಆ ಪೋಸ್ಟರ್ ನೋಡ್ದಾಗ, ಚದುರಂಗಕ್ಕು, ’ವಾಕವ್ವ’ಗೂ ಸಂಬಂಧವೇ ತಿಳೀತಿರ್ಲಿಲ್ಲ. ನನಗೂ ಸಹ ಮೊದಮೊದಲು ಟೈಟಲ್ ಕೇಳ್ದಾಗ ” ಏನು… ಏನಿರಬಹುದು” ಅಂತ ಅನ್ಸಿತ್ತು. ಆದರೆ, ಚದುರಂಗದೊಡನೆ ವಾಕವ್ವಳ ಸಂಬಂಧ ಅರಿತಾಗ, ನಾನೂ ಬೆಚ್ಚಿದ್ದೆ- ಕುತೂಹಲಕಾರಿಯಾದೆ

ಬೋರ್ಡ್ ಗೇಮ್ ಗಳ ಲೋಕಕ್ಕೆ ನಮ್ಮ ನಿರ್ದೇಶಕರಾದ ಕಶ್ಯಪ್ ಅವರು ನಮ್ಮನ್ನು ಕರೆದುಕೊಂಡು ಹೋಗಿ, ಚದುರಂಗದೂರಿನಲಿ ನಡೆಯಬಹುದಾದ ಒಂದು ಸಣ್ಣ ಕಥೆಯನ್ನು ಕಲ್ಪಿಸಿಕೊಂಡು, ಈ ನಾಟಕದಲ್ಲಿ ಹೇಳ್ತಾರೆ. ಚದುರಂಗದೂರಿನಲಿ, ಮಾತಿನ ಬಗ್ಗೆ, ಮಾತಿನ ಮಹತ್ವದ ಬಗ್ಗೆ ವಾಕವ್ವ ಮಾತಾಡ್ತಿರ್ತಾಳೆ. ಆದರೆ, ಚದುರಂಗದೂರಿನವರೇ, ಮಾತಿಗೆ ಮಹತ್ವ ಕೊಡದೇ, ಯಂತ್ರಗಳಲ್ಲಿ ಮಗ್ನರಾದಾಗ, ವಾಕವ್ವನ ಅಸ್ತಿತ್ವದೊಡನೆ ಅವಳೂ ಕಳೆದುಹೋಗುತ್ತಾಳೆ. ಚಂದದ ಚದುರಂಗದೂರು ಚದುರಿಹೋಗುತ್ತದೆ.

ಎಲ್ಲರೂ ಯಂತ್ರದ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಆದರೆ, ಗುಗ್ಗಯ್ಯ, ಎಲ್ಲರನ್ನು ಒಂದಾಗಿಸಲು, ವಾಕವ್ವಳನ್ನು ಹುಡುಕಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾನೆ. ಯಾರೂ ಸಹಕಾರ ನೀಡದಿದ್ದರೂ ತಾನೊಬ್ಬನೇ ವಾಕವ್ವಳನ್ನು ಹುಡುಕಲು ಗುಗ್ಗಯ್ಯ ಯಶಸ್ವಿಯಾಗುತ್ತಾನೆ.  ಹುಷಾರಿಲ್ಲದ ವಾಕವ್ವ, ಗುಗ್ಗಯ್ಯನಿಗೆ- ಆಗಿರುವ ಸಮಸ್ಯೆಗೆ ಪರಿಹಾರವನ್ನು ತಿಳಿಸುತ್ತಾಳೆ. ಆ ಪರಿಹಾರದಂತೆ ನಡೆದುಕೊಳ್ಳುವ ಗುಗ್ಗಯ್ಯ ಎಲ್ಲರ ಮಾತನ್ನೂ ಸರಿ ಮಾಡುತ್ತಾನೆ, ಮತ್ತೆ ಚದುರಂಗದೂರು ಒಂದಾಗುತ್ತದೆ. ನಾಟಕದಲ್ಲಿ ತೋರಿಸಲಾದ ಆ ಸಮಸ್ಯೆ  ಈಗಿನ ಸಮಾಜದಲ್ಲಿ ಎಲ್ಲೆಲ್ಲೂ ಕಾಣಬಹುದು ಹಾಗು ಅದನ್ನು ಬಗೆಹರಿಸುವ ರೀತಿ ಕೂಡಾ ಒಳ್ಳೆಯ ಮಜಾ ನೀಡುತ್ತದೆ.

ಈ ನಾಟಕ, ನಮಗೆ ಮಾತಿನ ಮಹತ್ವದ ಬಗ್ಗೆ ತಿಳಿಸಿಕೊಟ್ಟಿದೆ. ನಿಧಾನವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಲು ಆರಂಭಿಸಿರುವ ನಾವುಗಳೂ, ಈ…

View original post 29 more words

ಕನ್ನಡ ರಾಜ್ಯೋತ್ಸವಕ್ಕೆ ವಿದ್ಯಾಥಿ೯ಗಳ ಕೊಡುಗೆ

ರಾಜ್ಯೋತ್ಸವದಂದು ಮುಖಪುಟದಲ್ಲಿ ಕಾಮೆಂಟಿಸಿ ತಣ್ಣಗೆ ಕೂರಲಿಲ್ಲ ಇವರು.  ನಮ್ಮ ವಿದ್ಯಾಥಿ೯ಗಳು , ತಾವು ತಾವೇ ಸೇರಿಕೊಂಡು , ಗುಸು ಗುಸು ಮಾಡಿಕೊಂಡರು. ನಂತರ ತಾನೊಂದು "ಶಾಟ್ ೯ ಫಿಲಂ '' ಒಂದನ್ನು ಮಾಡುತ್ತಿರುವುದಾಗಿ ಹೇಳಿಕೊಂಡರು. ಸಂಜೆ 4.45ಕ್ಕೆ ವಿಜಯನಗರ ಬಿಂಬ ಕ್ಕೆ ಒಂದು ಕರೆ ಬಂತು. ಔಟ್ ಡೋರ್ ಶೂಟಿಂಗ್ ಇದೆ ವಿಜಯನಗರ ಬಿಂಬದ ಎಲ್ಲ ಪದಾಧಿಕಾರಿಗಳು ಬರಬೇಕು ಎಂದರು. ಇದೇನು? ಏನೇ ಹುಡುಗರು ಹುಡುಗಾಟಿಕೆ ಮಾಡುತ್ತಿದ್ದಾರೆ ಎಂದುಕೊಂಡೇ ಹೊರಟರು. ನೋಡಿದರೆ ವಿದ್ಯಾಥಿ೯ಗಳು ಬೀದಿ ನಾಟಕ ದ... Continue Reading →

2015-2016 ಸಾಲಿನ ಡಿಪ್ಲೊಮಾಗೆ ಅರ್ಜಿ ಆಹ್ವಾನ

ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರ ತನ್ನ 20 ನೇ ವಷ೯ದ ಸಂಭ್ರಮದಲ್ಲಿದೆ. ಕಳೆದ ಮೂರು ವಷ೯ಗಳಿಂದ ಆಸಕ್ತ ಯುವಕ ಯುವತಿಯರಿಗೆ ಒಂದು ವಷ೯ದ " ರಂಗಭೂಮಿ " ಡಿಪ್ಲೊಮಾವನ್ನು ನಡೆಸುತ್ತಿದೆ. 3 ವಷ೯ಗಳಿಂದ ಯಶಸ್ವಿಯಾಗಿ ನಡೆದ ಡಿಪ್ಲೊಮಾ ವಿದ್ಯಾರ್ಥಿಗಳು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಾಟಕ ಪ್ರದಶ೯ನ ನೀಡಿ ಅಪಾರ ಅನುಭವ ಮತ್ತು ಜನಮೆಚ್ಚುಗೆ ಗಳಿಸಿದ್ದಾರೆ, ಈ ಸಾಲಿನ ಡಿಪ್ಲೊಮಾಗೆ ಆಸಕ್ತ ಯುವಕ ಯುವತಿಯರಿಂದ ಅಜಿ೯ಗಳನ್ನು ಆಹ್ವಾನಿಸುತ್ತಿದ್ದೇವೆ. ತರಗತಿಗಳು ವಾರಾಂತ್ಯದಲ್ಲಿ ನಡೆಯಲಿದ್ದು , ನಾಟಕದ ತಾಲೀಮು... Continue Reading →

10 ಚಿತ್ರಗಳು 10 ಕಥೆಗಳು ಮತ್ತು ಕಲಾಗ್ರಾಮದ ತುಂಬಾ ಪುಟಾಣಿಗಳು.

20ನೇ ವರ್ಷದ ಸಂಭ್ರಮಕ್ಕೆ ವಷ೯ವಿಡೀ ಅಥ೯ಪೂಣ೯ ಕಾಯ್ರಕ್ರಮಗಳನ್ನು ಹಮ್ಮಿಕೊಂಡಿರುವ ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರದ ಮಕ್ಕಳ ವಿಭಾಗ ಇದೀಗ ಕನಾ೯ಟಕ ಲಲಿತ ಕಲಾ ಅಕಾಡೆಮಿಯ ಸಹಯೋಗದಲ್ಲಿ ಚಿತ್ರಕಥನ ಮತ್ತು ಕಲಾರಸಗ್ರಹಣ ಎಂಬ ವಿಶಿಷ್ಟ ಕಾಯ೯ಕ್ರಮವನ್ನು ಹಮ್ಮಿಕೊಳ್ಳಲಾಗಿದೆ . ಉದ್ಘಾಟನಾ ಕಾಯ೯ಕ್ರಮ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. 30 ಕ್ಕೂ ಹೆಚ್ಚು ಶಾಲೆಗಳ  ಮಕ್ಕಳು ಈ ಕಾಯ್ರಕ್ರಮದಲ್ಲಿ ಭಾಗವಹಿಸಲಿದ ್ದಾ ರೆ. ಅಲ್ಲದೆ ವಿಜಿಯನಗರ ಬಿಂಬದ ವಿದ್ಯಾಥಿ೯ ಗಳಿಂದ ಚಿತ್ರಕಥನ - ಚಿತ್ರ ಚೌಕಟ್ಟಿನಲ್ಲಿ ಕಥೆಗಳ ಹಬ್ಬ... Continue Reading →

20ನೇ ವರ್ಷದ ಸಂಭ್ರಮದ “ಚಿತ್ರಕಥನ ” – ತಯಾರಿಯಲ್ಲಿ ಚಿಣ್ಣರು

ಪ್ರತಿ ವಷ೯ದಂತೆ ಈ ವಷ೯ ಚಿತ್ರಕಥನ ಇರುತ್ತದೆ. ಆದರೆ ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ. ಅದರ ವಿವರ ಗಳು ಕ್ರಮೇಣ ನಿಮಗೆ ತಿಳಿಯುತ್ತದೆ, ಸಧ್ಯಕ್ಕೆ ಮಕ್ಕಳು ಹುರುಪಿನಿಂದ ತಯಾರಿ ನಡೆಸಿದ್ದಾರೆ ಅಂತಷ್ಟೆ ಹೇಳಬಹುದು. ಅವರ ಪುರಾವೆ ಇಲ್ಲಿದೆ. ಆಗಸ್ಟ್ 30 ರಂದು ಮಕ್ಕಳ ವಿಭಾಗದಿಂದ ಚಿತ್ರಕಥೆ - ಚಿತ್ರ ಚೌಕಟ್ಟಿನಲ್ಲಿ ಕಥೆ ಗಲಕ ಹಬ್ಬ' ಕಾಲೆಂಡರ್ ಈಗ್ಗೆ Mark ಮಾಡಿಕೊಳ್ಳಿ.

ಬಿ.ಆರ್.ಎಲ್ ಕವನ ಮತ್ತು ಚಿತ್ತಾರದ Craft ಹೀಗೊಂದು ಲಹರಿ.

ಚಿಣ್ಣರ ಚಿತ್ತಾರ 20 15 ರಲ್ಲಿ ವಿಶ್ವನಾಥ ಮಂಡಿಯವರು ಒಂದು ಹಕ್ಕಿ ಮಾಡಿಸಿದ್ದರು. ಅದನ್ನು ಕಂಡಾಗ ಬಿ ಆರ್ ಎಲ್ ಅವರ ಅಮ್ಮ ನಿನ್ನ ಎದಯಾಳದಲ್ಲಿ ಹಾಡು ನೆನಪಿಗೆ ಬಂತು, ಈ ಹಕ್ಕಿ ನೋಡಿ ನಿಮ್ಮComment ಹಾಕಿ...

ಡಾರ್ವಿನ್ ವಿಕಾಸವಾದ ಮತ್ತು ಚಿಣ್ಣರ ಚಿತ್ತಾರ

ಡ್ರಾಯಿಂಗ್ ತರಗತಿಯಲ್ಲಿ ಹೀಗೊಂದು ಲಹರಿ . ಮೂವರು ಪುಟಾಣಿಗಳು ಬರೆದ ಚಿತ್ರಗಳನ್ನ ನೋಡಿದಾಗ ಅನಿಸಿದ್ದು ಹೀಗೆ.  ವಿಕಾಸ ಎನ್ನುವುದು ಹೇಗೆ ಆಗಿರಬಹುದು  ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿವೆ ಈ ಕೆಳಗಿನ ಚಿತ್ರಗಳು... ಇದು ಮೀನು ವಿಕಾಸ ಆಗಿರಬಹುದಾದ ರೀತಿಯೇ ???!!!

ಶುದ್ಧಗೆ ಮತ್ತು ಎಂ.ಎಚ್. ಕೆ.

2010 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಈ ನಾಟಕ 26 ಫೆಬ್ರುವರಿ 2015 ರಂದು ನಯನ ಸಭಾಂಗಣ ದಲ್ಲಿ ಪ್ರದರ್ಶನ ವಾಗಲಿದೆ. ನಮ್ಮ ನಾಡಿನ ಪ್ರಖ್ಯಾತ ವಿಮರ್ಶಕರು ಪ್ರೊ. ಎಂ.ಎಚ್ ಕೃಷ್ಣಯ್ಯ ನವರ ಬಗೆಗಿನ ವಿಚಾರ ಸಂಕಿರಣ ಮತ್ತು ಅಭಿನಂದನಾ ಕಾರ್ಯಕ್ರಮ ದಲ್ಲಿ ಇದು ಪ್ರದರ್ಶನ ವಾಗಲಿದೆ.  ಅವಿರತ ಪುಸ್ತಕ ಸಾಂಸ್ಕೃತಿಕ ಸಂಘಟನೆ ಆಯೋಜಿಸಿರುವ ಕಾರ್ಯಕ್ರಮ ಇದಾಗಿದ್ದು ಫೆಬ್ರುವರಿ 26  ರಂದು ನಯನಾ ಸಭಾಂಗಣ ದಲ್ಲಿ ನಡೆಯಲಿದೆ.  ಒಂದು ರೀತಿಯಲ್ಲಿ ಶುದ್ಧಗೆ... Continue Reading →

ರಂಗಶಾಲೆಯ ಗೆಲುವಿನ ಗರಿ

ಈ ಶಾಲಿನ ಅಂದರೆ 2014-15 ಸಾಲಿನ ಮಕ್ಕಳ ವಿಭಾಗದ ವಿದ್ಯಾರ್ಥಿಗಳಿಗೆ 24-1-2015 ರಂದು ಮೆಚ್ಚುಗೆ ಮತ್ತು ಬೊಂಬೆ ಹಬ್ಬ ನಾಟಕೋತ್ಸವದ ಪ್ರಶಸ್ತಿ ಪತ್ರ ವಿತರಣಾ ಸಮಾರಂಭ ಚಿತ್ರಕೂಟ ಶಾಲೆಯಲ್ಲಿ . ಜೊತೆಗೆ ಗಾಂಧಿ ಪಾರ್ಕ್ ನಾಟಕ ಏರ್ಪಡಿಸಲಾಗಿದೆ.

Powered by WordPress.com.

Up ↑