ಕದ್ದು ಕೇಳಿದ್ದು

” ರುದ್ರಶ್ರಮಕ್ಕೆ ನಡಿ” ಈ ಮಾತು ಕೇಳುತ್ತಿದ್ದ ಹಾಗೆ ಅಲ್ಲಿದ್ದ ಪುಟಾಣಿಗಳೆಲ್ಲ ಒಕ್ಕೋರಲಿನಲ್ಲಿ ಗೋಳ್ಳೆ೦ದು ನಕ್ಕರು . ಆ ತಂಡದ ಎಲ್ಲರು ನಗೆಬುಗ್ಗೆ ಹರಿಸುತ್ತಲೇ ತಮ್ಮ ತಮ್ಮ ಸಾಲುಗಳನ್ನು ಹೇಳಲು ಪ್ರಾರಂಭಿಸಿದರು. ಮತ್ತದೇ ರುದ್ರಾ ಶ್ರಮ…… ಮತ್ತೆ ನಗೆ ಚಿಮ್ಮಿತು . ಏಕೆ ಹೀಗೆ ಎಂದುಕೊಂಡಿರಾ ಉತ್ತರಕ್ಕೆ ನೀವು ಬೊಂಬೆ ಹಬ್ಬ 2018 ಕ್ಕೆ ಬರಲೇಬೇಕು.

ಮಕ್ಕಳ ವಿಭಾಗದ ಹೆಮ್ಮೆಯ ಪ್ರಸ್ತುತಿ ಈ ಬೊಂಬೆ ಹಬ್ಬ. ಮಕ್ಕಳು ತಾವೇ ನಾಟಕ ರಚಿಸಿ , ನಿದೇ೯ಶಿಸಿ, ರಂಗ ಸಜ್ಜಿಕೆ ಮಾಡಿ, ಅತಿಥಿಗಳನ್ನು ಆಹ್ವಾನಿಸುತ್ತಾರೆ.

ಅಂದ ಹಾಗೆ ….. ಅತಿಥಿ ಅಂದ ತಕ್ಷಣ ನೆನಪಾಯ್ತು .

ಒಂದು ಗುಂಪು ನಾಟಕ ತಾಲೀಮನ್ನು ಮುಗಿಸಿ ಬಿಸಿ ಬಿಸಿ ಚರ್ಚೆಯಲ್ಲಿ ಮುಳುಗಿದ್ದರು . ನಿವಾ೯ಹಕರು ಕೊಂಚ ಗದರುವ ದನಿಯಲ್ಲಿಯೇ ಕೇಳಿದರು “ನಿಮ್ಮ ತಂಡದಿಂದ ಯಾರನ್ನ ಅತಿಥಿಗಳು ಅಂತ ಕರೀತೀರಾ?” . ಪುಟಾಣಿ ಆಯೋಜಕರು ಹಲ್ಲುಗಿಂಜಿದರು . ಯಾರು ಹೇಳಿರೋ? ಎಂದು ದಬಾಯಿಸಿದಾಗ ” ಹಿ ಹಿ ಹಿ ಅದೇ ಕಿಚ್ಚ ಸುದೀಪ್ ಇದ್ದಾರಲ್ಲ ಅವರನ್ನ ಕರಿಯೋಣ ಅಂತ ಇವನು ಅಂದ ” ಎಂದರು. ಮತ್ತೆ ನೆಗೆಯ ಬುಗ್ಗೆ . “ಲೇ ,ಅವರು ಬರಲ್ಲ ಕಣೋ” ಎಂದ ಇನ್ನೋಬ್ಬ . “ದರ್ಶನ್ ಓ.ಕೆನಾ ??” ಎಂದ ಮತ್ತೊಬ್ಬ. ಮತ್ತೊಮ್ಮೆ ನಗೆಯ ಬುಗ್ಗೆ. ” ಬೇಡ ಬಿಡೊ , ನಮ್ಮನೆ ಪಕ್ಕ ಒಬ್ಬರು ರಂಗಭೂಮಿ ಕಲಾವಿದರು ಇದ್ದಾರೆ ಅವರನ್ನೇ ಕರೆಯೋಣ” ಎ೦ದಾಗ ಒಕ್ಕೂರಲಿನಿಂದ ಸೈ ಎಂದರು ನಿರ್ವಾಹಕರು ಮತ್ತು ಚಿಣ್ಣರು . ಹೀಗೆ ರಂಗಭೂಮಿ ಕಲಸ ಸುದ್ದಿಲ್ಲದೇ ಸಾಗುತ್ತಿದೆ .

Hall Booking status ಓ ಇಲ್ಲ Hot seat ಓ ಎನ್ನುವಂತೆ Hall Book ಮಾಡುತ್ತಾರೆ.

ನಿರ್ದೇಶಕನೊಬ್ಬ ಬಂದು ತನ್ನ ಅಳಲನ್ನು ತೋಡಿಕೊಂಡ ” ನೋಡಿ ಅಕ್ಕ , ನಮ್ಮ ನಾಟಕದ Practice ಮಾಡುವಾಗ ಬೇರೆಯವರ ನಾಟಕದ Dialogue ಹೇಳುತ್ತಿದ್ದಾಳೆ “. ಮತ್ತೊಬ್ಬ ನಿರ್ದೇಶಕ ” ಲೋ . . ಅದಾದರೂ ಪರವಾಗಿಲ್ಲವೊ…. ಇವನು ನಮ್ಮ ನಾಟಕದ ಎಲ್ಲರ Dialogue ಗೂ ಗೊತ್ತು ಅಂತ ತೋರಿಸಿಕೊಳ್ಳೋಕೆ ಯಾರು Dialogue ಹೇಳಿದರೂ ಇವನೂ ಬಾಯಿ ಆಡಿಸ್ತಾ ಇರ್ತಾನೆ ” .

“ಲೋ ನಮ್ಮ ನಾಟಕದಲ್ಲಿ ಅಪ್ಪ ಇದ್ರೆ ಅಮ್ಮ ಇರಲ್ಲ , ಅಮ್ಮ ಇದ್ರೆ ಅಪ್ಪ ಇರಲ್ಲ” ” ಇಬ್ಬರೂ ಇದ್ರೆ? ” ತಾತ ಅಜ್ಜಿ ಇರಲ್ಲ” – ಅಬ್ಬರದ ನಗು….

” ಲೇ, ತಮಾಷೆ ಕೇಳಿರೋ, ಇವತ್ತು ನಮ್ಮ Director ಎ Absentಉ ”

– ಇನ್ನೂ ಅಬ್ಬರದ ನಗು + ಕೇಕೆ

ಈ ಪುಟಾಣಿ ನಿರ್ದೇಶಕರು ತಮ್ಮ ತಂಡವನ್ನು ಒಗ್ಗೂಡಿಸಿ ಕೊಂಡು ನಡೆಯುವಾಗ ಬಾಹುಬಲಿಯ ಸಿನೆಮಾದಲ್ಲಿ ಪುತ್ಥಳಿಯನ್ನು ನಿಲ್ಲಿಸುವಾಗಿನ ದೃಶ್ಯ ಕಣ್ಮುಂದೆ ಬರುತ್ತದೆ. ಪುಟಾಣಿ ಹೆಗಲುಗಳು ಕಿರು ನಾಟಕೋತ್ಸವವನ್ನು ಆಯೋಜಿಸುವ ಅಗಾಧ ಜವಾಬ್ದಾರಿಯನ್ನು ನಗೆಯ ಬುಗ್ಗೆ ಉಕ್ಕಿಸುತ್ತಲೇ , ಖುಷಿ ಖುಷಿಯಾಗಿಯೇ , ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ.

2018 ಸಾಲಿನ ಬೊಂಬೆ ಹಬ್ಬ ಇದೇ ಅಕ್ಟೋಬರ್ 26, 27, 28 ರ೦ದು “ಸರಳಾಂಗಣ’ ಆಪ್ತ ರಂಗಮಂದಿರದಲ್ಲಿ ನಡೆಯಲಿದೆ.

ಬರುವಿರಲ್ಲವೇ . . . ??!!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Website Powered by WordPress.com.

Up ↑

<span>%d</span> bloggers like this: