5 ವರ್ಷದ ಸಂಭ್ರಮದ ಹೊಸ ಹೆಜ್ಜೆಗಳು

ಬೀದಿ ನಾಟಕೋತ್ಸವದ ಯಶಸ್ಸಿನ ಬೆನ್ನಲ್ಲೆ ನಮ್ಮ ಕೇಂದ್ರ ಹಮ್ಮಿಕೊಂಡ ಮತ್ತೊಂದು ಕಾಯ೯ಕ್ರಮ “ವಿಶ್ವ ರಂಗಭೂಮಿ ದಿನಾಚರಣೆ 2018 ” ಅಂಗವಾಗಿ ಹಮ್ಮಿಕೊಂಡ ವಿಶಿಷ್ಟ ಕಾಯ್ರಕ್ರಮ ” ರಂಗ ಚಿಂತನ” .

ಈ ರಂಗ ಚಿಂತನ ಕಾಯ೯ಕ್ರಮ ಒಂದು ರೀತಿಯಲ್ಲಿ continuing theatre education Program ಎನ್ನಬಹುದು. ಈ 5 ವರ್ಷಗಳಲ್ಲಿ ನಮ್ಮಲ್ಲಿ ಅಧ್ಯಯನ ನಡೆಸಿದ ಹಳೆಯ ವಿದ್ಯಾರ್ಥಿಗಳು ತಮ್ಮ ರಂಗ ಪಯಣ ಮುಂದುವರಿಸಿದ ಪರಿಯನ್ನು , ಅದರ ಮೂಲಕ ಪಡೆದುಕೊಂಡ ರಂಗಾನುಭವವನ್ನು ಎಲ್ಲರ ಜೊತೆ ಹಂಚಿಕೊಂಡರು. ಜೊತೆಗೆ ತಾವು ಮಂಡನೆ ಮಾಡಿದ ವಿಷಯಗಳ ಕ್ಷೇತ್ರಗಳಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಆಗಬೇಕಿರುವ ಕೆಲಸಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಖ್ಯಾತ ಲೇಖಕರಾದ ಸಂಧ್ಯಾರಾಣಿಯವರು ಅಧ್ಯಕ್ಷತೆವಹಿಸಿದ್ದರು .

ಮೇಲ್ಕಂಡ ವಿಷಯಗಳಿಗೆ ಸಂಬಂಧಿಸಿದ ಹಳೆಯ ವಿದ್ಯಾರ್ಥಿಗಳ ಮಾತು , ಕನ್ನಡ ರಂಗಭೂಮಿಯ ಪ್ರಸಕ್ತ ವಿದ್ಯಮಾನಗಳ ಇಣುಕು ನೋಟ ಎಂದರೆ ತಪ್ಪಾಗಲಾರದು. ರಂಗಾಸಕ್ತರಿಗೆ ಮಾಹಿತಿಪೂರ್ಣವಾಗಿಯೂ, ಕಿರಿಯ ವಿದ್ಯಾಥಿ೯ಗಳಿಗೆ ಮಾಗ೯ ದಶ೯ಕವಾಗಿಯೂ ಇದ್ದದ್ದು ಗಮನಿಸಬೇಕಾದ ಅಂಶ.

ರಂಗತಂಡವಾಗಿ ವಿಜಯನಗರ ಬಿಂಬ ಮಾಡಿರುವ ರಂಗ ಪ್ರದಶ೯ನಗಳ ಬಗ್ಗೆ ಹಲವರಿಗೆ ತಿಳಿದಿದೆ. ಆದರೆ ರಂಗಶಿಕ್ಷಣ ಕೇಂದ್ರವಾಗಿ , ಹಿರಿಯರ ವಿಭಾಗದ 5ನೇ ವಷ೯ದ ಸಂಭ್ರಮದಲ್ಲಿ ರಂಗ ಚಿಂತನ ನಡೆಸುವ ಪ್ರಯತ್ನದಲ್ಲಿ ಸಫಲವಾದವು ಎನ್ನುವ ಭಾವ ಮನದಲ್ಲಿ ಮೂಡಿದ್ದು ಸುಳ್ಳಲ್ಲ .

ನೀವೇನಂತೀರ??

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Website Powered by WordPress.com.

Up ↑

<span>%d</span> bloggers like this: