ದೀಪಾವಳಿಯ ಸಡಗರದಲ್ಲಿ ಮತ್ತೊಂದು ಉಲ್ಲಾಸಕರ ಅಂಶವೆಂದರೆ ವಿಜಯನಗರ ಬಿಂಬದಲ್ಲಿ ಭರದಿಂದ ಸಾಗಿದೆ ಚಿನಕುರಳಿ ನಾಟಕೋತ್ಸವದ ತಯಾರಿ.
ಮಕ್ಕಳ ನಾಟಕ ಬರೆದು, ಅವರೆ ನಿದೇ೯ಶನ ಮಾಡಿ , ಅವರೇ ತಾಲೀಮು ಮಾಡಲು ತಾಲೀಮು ಕೊಠಡಿಯನ್ನು ಕಾಯ್ದಿರಿಸುವುದು, ಅತಿಥಿಗಳನ್ನು ತಾವೇ ಕರಿಯುವುದು ಮುಂತಾದ ನಟನೆಯಲ್ಲದೆ ನಾಟಕೋತ್ಸವವನ್ನು ಆಯೋಜಿಸುವ ಎಲ್ಲ ಹೊಣೆ ಹೊತ್ತಿದ್ದಾರೆ ಚಿಣ್ಣರು. ಹಾಗಾಗಿ ಚಿನಕುರಳಿ ನಾಟಕೋತ್ಸವ ಬಹಳ ಮಹತ್ವದ್ದಾಗಿದೆ. ಮಕ್ಕಳ ಆಲೋಚನೆಗಳಿಗೆ ಹಿಡಿದ ಕನ್ನಡಿ ಈ ಚಿನಕುರಳಿ ನಾಟಕೋತ್ಸವ.
ಇದೇ ಅಕ್ಟೋಬರ್ 27, 28, 29, 2017 ಅಂದರೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಮೂರು ದಿನಗಳು ಚಿನಕುರಳಿ ಮಕ್ಕಳ ಕಿರು ನಾಟಕೋತ್ಸವ ನಡೆಯಲಿದೆ.
ಎಲ್ಲ ರಂಗಾಸಕ್ತರಿಗೂ ಈ ಮೂಲಕ ಆಹ್ವಾನ.
ಚಿನಕುರಳಿಗಳಷ್ಟೇ ಎಂದು ಕಡೆಗಣಿಸಬೇಡಿ ಇಲ್ಲಿ ಚಿನಕುರಳಿ ಗಳಷ್ಟೇ ಇಲ್ಲ ಆನೆ ಪಟಾಕಿ, ಕುದುರೆ ಪಟಾಕಿ , ಲಕ್ಷ್ಮಿ ಪಟಾಕಿ, ಆಟಂ ಬಾಂಬ್ ಗಳೂ ಸೇರಿದಂತೆ ಹಲವಾರು ಪಟಾಕಿಗಳು ತಮ್ಮ ಕರಾಮತ್ತು ತೋರಿಸಲಿವೆ. ಹೂ ಕುಂಡಗಳು ಭೂ ಚಕ್ರ ವಿಷ್ಣು ಚಕ್ರಗಳ ಜೊತೆ ತಮ್ಮ ಮನಸಿನ ಬೆಳಕಿಗೆ ಹೊಸ ರಂಗಾಥ೯ ನೀಡಲಿವೆ. ತಮ್ಮ ಯೋಚನಾ ಲಹರಿಯ ರಾಕೆಟ್ಟನ್ನು ಬಾನೆತ್ತರಕ್ಕೆ ಹಾರಿಸಲಿವೆ.
ಆದ್ದರಿಂದಲೆ ಬನ್ನಿ
ಚಿನಕುರಳಿ ಮಕ್ಕಳ ಕಿರುನಾಟಕೋತ್ಸವ 2017 ಕ್ಕೆ …..
ಬೆಳಕಿನ ರಂಗವಲ್ಲಿ ರಂಗಕ್ಕೇರುವ ಬಗೆಗೆ ಸಾಕ್ಷಿಯಾಗಿ ಬನ್ನಿ.
ಮಕ್ಕಳ ಮನಸಿನ ಅಂತರಾಳದ ಇಣುಕು ನೋಟ ನಿಮಗಾಗಿ ಕಾದಿದೆ.
Leave a Reply