ಬಣ್ಣಗಳು ಮಾತನಾಡುವಾಗ…

ಲೇಖನಿಯಿಂದ 🙂

ಹಾಳೆಯ ಮೇಲೆ ಬಣ್ಣ ಹಚ್ಚುವುದು ‘ಚಿತ್ರಕಲೆ’ ಆದರೆ, ಅದೇ ಹಾಳೆಯ ಮೇಲೆ ಪದಗಳು ಬರೆದರೆ ಅದು ಕಥೆಯಾಗುತ್ತದೆ. ಆದರೆ ಹಚ್ಚಿರುವ ಬಣ್ಣಕ್ಕೆ ಪದ ನೀಡುವುದೇ…..”ಚಿತ್ರಕಥನ”
ಒಂದು ಚಿತ್ರಕಲೆಯನ್ನು ಒಬ್ಬ ಒಂದು ರೀತಿಯಲ್ಲಿ ನೋಡಿದರೆ, ಮತ್ತೊಬ್ಬ ಅದೇ ಚಿತ್ರಕಲೆಯನ್ನು ಇನ್ನೊಂದು ರೀತಿಯಲ್ಲಿ ನೋಡುವನು. ಅದೇ ಚಿತ್ರಕಲೆಯ ವಿಶೇಷತೆ. ಒಂದು ಕಥೆಯನ್ನು ಓದಿದಾಗ ಬೇರೆ ಬೇರೆ ಅರ್ಥ ಅಡಗಿರುತ್ತದೆ, ಅದು ಓದುಗನ ಮನೋಧರ್ಮ ಅಥವ ಅವನ ಸುತ್ತಲಿನ ಪರಿಸರದ ಮೇಲೆ ಅವಲಂಬಿತವಾಗಿದ್ದು ಈ ಅಂಶಗಳ ಮೇಲೆ ಅವನ ಅರ್ಥ ನಿಂತಿರುತ್ತದೆ.
ಈ ಚಿತ್ರಕಥನದಲ್ಲಿ ಪದಗಳಿಗೆ ಬಣ್ಣಗಳ ಭಾವನೆಯನ್ನು, ಬಣ್ಣಗಳಿಗೆ ಪದಗಳ ಸೊಬಗನ್ನು ನೀಡುತ್ತೇವೆ. ಇದು ಚಿತ್ರಕಲೆ ಮತ್ತು ಬರವಣಿಗೆಯ ಬೆಸುಗೆ.
ಎಲ್ಲಾ ವಿದ್ಯಾರ್ಥಿಗಳನ್ನು ತಂಡಗಳಾಗಿ ವಿಂಗಡಿಸಿ, ಎಲ್ಲಾ ತಂಡಗಳಿಗೆ ಒಂದು ದೊಡ್ಡ ವರ್ಣಚಿತ್ರವನ್ನು ಸೃಷ್ಟಿಸಬೇಕೆನ್ನುತ್ತಾರೆ. ನಂತರ ಒಂದು ತಂಡ ರಚಿಸಿದ ಚಿತ್ರವನ್ನು ಇನ್ನೊಂದು ತಂಡಕ್ಕೆ ಕೊಟ್ಟು ಆ ಚಿತ್ರದ ಮೇಲೆ ತಮ್ಮ ಸೃಜನಶೀಲತೆಯನ್ನು ಉಪಯೋಗಿಸಿಸಿ, ಮನಸ್ಸನ್ನು ಒಂದು ಕಥಾ ಲೋಕದಲ್ಲಿ ಮುಳುಗುವ ಹಾಗೆ ಮಾಡುತ್ತಾರೆ. ಆ ಕಥಾಲೋಕದ ಒಡೆಯನಾದ ಕಥೆತಾತ ಕಾಣದ ಕೋಣೆಯಲಿ ನಿಂತು ವಿದ್ಯಾರ್ಥಿಗಳೆಲ್ಲರಿಗೂ ಕಥೆ ಕಟ್ಟುವುದು ಹೇಗೆ, ಕಟ್ಟಿದ ಕಥೆಯನ್ನು ವಿವರಿಸುವುದು ಹೇಗೆ ಎಂದು ಕಲಿಸುತ್ತಾ ಮಾರ್ಗದರ್ಶಿಯಾಗಿ ನಿಲ್ಲುತ್ತಾನೆ.
ಕಟ್ಟಿರುವ ಕಥೆಯನ್ನು “ಚಿತ್ರಕಥನ” ಎಂಬ ಕಾರ್ಯಕ್ರಮದ ಮುಖಾಂತರ ಜನರಿಗೆ  ವಿದ್ಯಾರ್ಥಿಗಳು ಹೇಳುತ್ತಾರೆ. ಇದು ನಮ್ಮ ವಿಜಯನಗರ ಬಿಂಬದ ಶನಿವಾರದ ರಂಗಶಾಲೆಯ ಮೊದಲ ಕಾರ್ಯಕ್ರಮ.
ಕೇವಲ ಮನರಂಜನೆಗೆ ಸೀಮಿತವಾದ ಕಥೆಗಳಲ್ಲದೆ, ನೀತಿಪಾಠ ಉಳ್ಳ ಕಥೆಗಳನ್ನು ರಚಿಸಿ ಪ್ರದರ್ಶಿಸಲಾಗುತ್ತದೆ. ಈ ಕಥೆಗಳು, ಸಾಮಾನ್ಯ ಮನುಷ್ಯ ಸಮಾಜದಲ್ಲಿ ಹೇಗಿರಬೇಕು ಎನ್ನುತ್ತವೆ. ಅವನು…

View original post 193 more words

Powered by WordPress.com.

Up ↑