ಕನ್ನಡ ರಾಜ್ಯೋತ್ಸವಕ್ಕೆ ವಿದ್ಯಾಥಿ೯ಗಳ ಕೊಡುಗೆ

DSC08933 DSC08935 ರಾಜ್ಯೋತ್ಸವದಂದು ಮುಖಪುಟದಲ್ಲಿ ಕಾಮೆಂಟಿಸಿ ತಣ್ಣಗೆ ಕೂರಲಿಲ್ಲ ಇವರು.  ನಮ್ಮ ವಿದ್ಯಾಥಿ೯ಗಳು , ತಾವು ತಾವೇ ಸೇರಿಕೊಂಡು , ಗುಸು ಗುಸು ಮಾಡಿಕೊಂಡರು. ನಂತರ ತಾನೊಂದು “ಶಾಟ್ ೯ ಫಿಲಂ ” ಒಂದನ್ನು ಮಾಡುತ್ತಿರುವುದಾಗಿ ಹೇಳಿಕೊಂಡರು. ಸಂಜೆ 4.45ಕ್ಕೆ ವಿಜಯನಗರ ಬಿಂಬ ಕ್ಕೆ ಒಂದು ಕರೆ ಬಂತು. ಔಟ್ ಡೋರ್ ಶೂಟಿಂಗ್ ಇದೆ ವಿಜಯನಗರ ಬಿಂಬದ ಎಲ್ಲ ಪದಾಧಿಕಾರಿಗಳು ಬರಬೇಕು ಎಂದರು. ಇದೇನು? ಏನೇ ಹುಡುಗರು ಹುಡುಗಾಟಿಕೆ ಮಾಡುತ್ತಿದ್ದಾರೆ ಎಂದುಕೊಂಡೇ ಹೊರಟರು. ನೋಡಿದರೆ ವಿದ್ಯಾಥಿ೯ಗಳು ಬೀದಿ ನಾಟಕ ದ ಘೋಷಣೆ ಮಾಡುತ್ತಿದ್ದಾರೆ.
“ನಾಟಕ ನಾಟಕ –  ಬೀದಿ ನಾಟಕ”
“ಯಾವ ನಾಟಕ ? –   ನವಕನಾ೯ಟಕ ”
ನೋಡ ನೋಡುತ್ತಿದ್ದಂತೆ ” ನವಕನಾ೯ಟಕ ” ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತಾ ಹೋಯ್ತು. .
ಕನ್ನಡ ಇಂದಿನ ಸ್ಥಿತಿಗತಿಗಳೆಲ್ಲವನ್ನು ಈ ಪುಟಾಣಿಗಳು ಸಮಥ೯ವಾಗಿ ಬಿಂಬಿಸಿದರು. ಕನ್ನಡ ಸಿನೆಮಾ, ಶಾಲೆಗಳಲ್ಲಿ ಕನ್ನಡ, ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ನಡೆದ ಈ ನಾಟಕ ನೋಡಿ ಅಲ್ಲಿದ್ದ ಜನರು ಖುಷಿಪಟ್ಟರು.  ಮಕ್ಕಳ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು ಅಲ್ಲಿದ್ದ ಮಂದಿ.DSC08950
2೦ ವರ್ಷದಿಂದ ಕನ್ನಡವನ್ನು ಉಸಿರಾಗಿಸಿಕೊಂಡ  ಒಂದು ರಂಗಶಿಕ್ಷಣ ಕೇಂದ್ರಕ್ಕೆ ರಾಜ್ಯೋತ್ಸವದ ಸಂದಭ೯ದಲ್ಲಿ ವಿದ್ಯಾಥಿ೯ಗಳು ಇದಕ್ಕಿಂತ ಹೆಚ್ಚಿನ ಕೊಡುಗೆ ಏನು ಕೊಡಬಹುದು?
ರಂಗ ಶಿಕ್ಷಣ ಕೇಂದ್ರದ ವಿದ್ಯಾಥಿ೯ ಒಬ್ಬ ತಾನೇ ಬೀದಿ ನಾಟಕ ಬರೆದು ನಿದೇ೯ಶಿಸುವುದು ಸವೇ೯ ಸಾಮಾನ್ಯ ಎಂದು ನೀವು ಅನ್ನಬಹುದು .
ಆದರೆ ಇಂದು ನಡೆದಿದ್ದು ಅದಕ್ಕಿಂತ ತುಂಬಾ ಮಹತ್ವದ್ದು
ಕಾರಣ –
1.ನಟಿಸಿದವರೆಲ್ಲ ಮಕ್ಕಳ ವಿಭಾಗದ ವಿದ್ಯಾಥಿ೯ಗಳು
2. ರಚಿಸಿ ನಿದೇ೯ಶಿಸಿದ್ದು ಹಿರಿಯರ ವಿಭಾಗದ ಡಿಪ್ಲೊಮಾ ವಿದ್ಯಾಥಿ೯
3. ಇದೆಲ್ಲವೂ ಆ ಕೇಂದ್ರದ ಶಿಕ್ಷಕರಿಗೆ ರಾಜ್ಯೋತ್ಸವದ ಕೊಡುಗೆ ಆದ್ದರಿಂದ ಎಲ್ಲವೂ ಗುಟ್ಟಾಗಿ ನಡೆದಿತ್ತು.
4, ಆದುದರಿಂದಲೇ ಇದು ಒಂದು ರೀತಿಯಲ್ಲಿ ಒಂದು ರಂಗಶಿಕ್ಷಣ ಕೇಂದ್ರದ ಶಿಕ್ಷಣದ ಗುಣಮಟ್ಟವನ್ನು ನಿಧಾ೯ರಿಸುವ,ಒರೆಗೆ ಹಚ್ಚುವ ಒಂದು ದಿನ ಎಂದರೆ ತಪ್ಲಾಗಲಾರದು.

ನಾಟಕ ಮಾಡಿದ್ದು ವಿದ್ಯಾಥಿ೯ಗಳೇ ಆದರೂ ಗೆದ್ದದ್ದು ರಂಗಭೂಮಿ .
ಅಷ್ಟೇ ಅಲ್ಲ ಕನ್ನಡ  ರಂಗಭೂಮಿ.
ಅಷ್ಟೇ  ಅಲ್ಲ  ಕನ್ನಡ  ಮಕ್ಕಳ ರಂಗಭೂಮಿ
ಅಷ್ಟೇ  ಅಲ್ಲ  ಕನ್ನಡ  ಮಕ್ಕಳ ಬೀದಿ ರಂಗಭೂಮಿ. ….

ನಾಟಕದಲ್ಲಿ ನಟಿಸಿದ ಸೂಯ೯ , ಅಭಿಷೇಕ್ , ಸಾಗರ್ ದೇವ್, ಸುಹಾಸ್, ಹೇಮಂತ್ , ಅಭಿರಾಮ್ ಮತ್ತು ಅಚಿಂತ್ಯ ನಾಟಕಕ್ಕೆ ಜೀವ ತುಂಬಿದರು .
ನಾಟಕವನ್ನು ರಚಿಸಿ ನಿದೇಶಿಸಿದ ಭರತ್,ಸ್ ಜಗನ್ನಾಥ್ ಒಳ್ಳೆಯ ನಾಟಕಕಾರನಾಗುವ ಎಲ್ಲ ಲಕ್ಷಣಗಳನ್ನು ಈ ನಾಟಕದಲ್ಲಿ ತೋರಿಸಿ ,  ಭರವಸೆಯನ್ನು ಮೂಡಿಸುತ್ತಿದ್ದಾನೆ.

ವಿಜಯನಗರ ಬಿಂಬದ ವತಿಯಿಂದ ಈ ಎಲ್ಲ ವಿದ್ಯಾಥಿ೯ಗಳಿಗೂ ತುಂಬು ಹೃದಯದ ಅಭಿನಂದನೆಗಳು.
ಅಂದ ಹಾಗೆ ಇದೇ ನಾಟಕ ಈ ಶನಿವಾರ ಮರು ಪ್ರದಶ೯ನಗೊಳ್ಳಲಿದೆ , ಸಾಧ್ಯವಾದರೆ ಬನ್ನಿ .

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Powered by WordPress.com.

Up ↑

%d bloggers like this: