ಒಂದರ ಮೇಲೊಂದು ಚಟುವಟಿಕೆಗಳಿಂದ ಗಿಜಿಗುಡುತ್ತಿದೆ ವಿಜಯನಗರ ಬಿಂಬ

ವಿಜಯನಗರ ಬಿಂಬದ ಅಂಗಳದಲ್ಲಿ ಆಗಸ್ಟ್ 9 ಮತ್ತು 10 ಚಿತ್ರಕಥನ ನಡೆಯಿತು.
image

ಉದ್ಘಾಟಿಸಿ ಮಾತನಾಡಿದ ಖ್ಯಾತ ಎಂ.ಎಸ್. ಮೂರ್ತಿ ನಮ್ಮ ಮಕ್ಕಳ ಚಿತ್ರಕಥನ ವೀಕ್ಷಿಸಿ ಹೀಗೆಂದರು ” Ways of seeing an artwork ಬಹಳ ಮುಖ್ಯ, ಇಲ್ಲದಿದ್ದರೆ ಕಲಾವಿದರ ಶ್ರಮ ವ್ಯರ್ಥವಾಗುತ್ತದೆ. ಸೃಜನಶೀಲ ಮನಸ್ಸುಗಳನ್ನು ಹುಟ್ಟು ಹಾಕುವ ಕೆಲಸ ವಿಜಯನಗರ ಬಿಂಬ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಅಂದು ಖ್ಯಾತ ನಿರ್ದೇಶಕರಾದ ಋತ್ವಿಕ್ ಸಿಂಹ ಅವರು ಅತಿಥಿಯಾಗಿದ್ದರು.
image

ಎರಡನೇ ದಿನ ಖ್ಯಾತ ಕವಯಿತ್ರಿ ರಂಜನಿ ಪ್ರಭು ಅವರು ಮತ್ತು ರಂಗಕರ್ಮಿ ಎಂ. ಸಿ. ಆನಂದ್ ಆಗಮಿಸಿದ್ದರು .
image

7 ಕಥೆಗಳು ಮುಗ್ಧ ಮನಸ್ಸುಗಳು ಸಮಾಜಕ್ಕೆ ಹಿಡಿದ ಕನ್ನಡಿ ಎಂದರೆ ತಪ್ಪಾಗಲಾರದು. ಕಥೆಗಳನ್ನು ಕಥನದ ರೀತಿಯಲ್ಲಿ ಪ್ರದರ್ಶಿಸಿ ಕಲಾಭಿಮಾನಿಗಳನ್ನು ರಂಜಿಸಿದರು.

ಈಟಿವಿ ಕನ್ನಡ ನ್ಯೂಸ್ ಚಾನೆಲ್ ಸಹಯೋಗದಲ್ಲಿ ಈ 2 ದಿನಗಳ ಕಥೆ
ಮತ್ತೊಮ್ಮೆ . .
ಅಝೀಮ್ ಪ್ರೇಮ್ ಜಿ ಯೂನಿವರ್ಸಿಟಿ ಏರ್ಪಡಿಸಿದ್ದ ಕಥಾವನದಲ್ಲಿ 7 ಕಥೆಗಳು ಪ್ರದರ್ಶಿಸಿದರು.
ಅನೇಕ ಶಾಲಾ ಮಕ್ಕಳು ಮತ್ತು ಶಿಕ್ಷಕರು ಆಗಮಿಸಿದ್ದರು.
ಹಿರಿಯರು ಕಿರಿಯರು ಎನ್ನುವ ಭೇದ ವಿಲ್ಲದೇ ಎಲ್ಲರೂ ನಮ್ಮ ವಿದ್ಯಾರ್ಥಿಗಳ ಕಥೆಗಳಿಗೆ ಆನಂದಿಸಿದರು.

Leave a comment

Website Powered by WordPress.com.

Up ↑