ಎ.ಎಸ್.ಎಂ ನಾಟಕೋತ್ಸವದಲ್ಲಿ ಎನ್.ಎಸ್.ಕೆ ನೆನಪಿನ ದೋಣಿ

ಎನ್.ಎಸ್.ಕೆ ನುಡಿ

ಅಂದು ನಮ್ಮ ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಂದ ಎರಡು ನಾಟಕಗಳನ್ನು ಪ್ರದರ್ಶಿಸಲು ಆಹ್ವಾನ ಬಂದಿತ್ತು. ನಮ್ಮ ಸಂಸ್ಥಾಪಕರಾದ ಎ.ಎಸ್.ಎಂ ಅವರ ನೆನಪಿನ ನಾಟಕೋತ್ಸವ ಎಂದ ಮೇಲೆ ಕೇಳಬೇಕೆ. ಹುಮ್ಮಸ್ಸಿನಿಂದಲೇ ನಮ್ಮ ಡಿಪ್ಲೊಮಾ ವಿಧ್ಯಾರ್ಥಿಗಳು ಎರಡು ನಾಟಕಗಳನ್ನು ತಯಾರು ಮಾಡಿಕೊಂಡಿದ್ದರು. ಡಾ.ಎಸ್.ವಿ.ಕಶ್ಯಪ್ ನಿರ್ದೇಶನದ ಬೀದಿ ನಾಟಕ ಮೂಢಾ ಇದು ನಂಬಿಕೆ ಮತ್ತು ಎಸ್.ವಿ.ಸುಶ್ಮಾ ನಿರ್ದೇಶನದ ಆ ಗಾಂಧಿ ಈ ಗಾಂಧಿ.

ಈ ಎರಡು ನಾಟಕಗಳ ನಡುವೆ ಎ.ಎಸ್.ಎಂ ಸಮಕಾಲೀನರಾದ ಎನ್. ಎಸ್. ಕೃಷ್ಣಮೂರ್ತಿಅವರು ಎ.ಎಸ್.ಎಂ ಅವರ ಒಡನಾಟದ ತಮ್ಮ ನೆನಪಿನ ದೋಣಿಯಲ್ಲಿ ಅಲ್ಲಿ ನೆರೆದಿದ್ದ ಎಲ್ಲರನ್ನು ವಿಹಾರ ಮಾಡಿಸಿದರು.

ಆಕಾಶವಾಣಿ ಯ ಚರಿತ್ರೆಯ ಹಾಳೆಗಳನ್ನು ತಿರುವುತ್ತಾ,  ಆಕಾಶವಾಣಿ ಈರಣ್ಣನ ದೈತ್ಯ ಪ್ರತಿಭೆಯ ಝಲಕ್ ಗಳನ್ನು  ಎಲ್ಲರೊಂದಿಗೆ ಹಂಚಿಕೊಂಡರು. ಅವರ ನುಡಿ ಗಳನ್ನು ಅವರ ಅನುಮತಿಯಿಂದಲೇ ಇಲ್ಲಿ quote ಮಾಡುತ್ತಿದ್ದೇನೆ.

” ಎ.ಎಸ್.ಎಂ ಅವರು ಆಕಾಶವಾಣಿಯಲ್ಲಿ ಆಗತಾನೆ ಪ್ರಾರಂಭವಾಗಿದ್ದ Drama voices ವಿಭಾಗಕ್ಕೆ ಸೇರಿದರು. 

ಆಗ ಆಕಾಶವಾಣಿಯಲ್ಲಿ ಮಡಿವಂತಿಕೆ ಯಿತ್ತು. ಭಾಷೆಯ ವಿಷಯದಲ್ಲಿ ಹೊಸ ಪ್ರಯೋಗಗಳನ್ನು ಅಂದರೆ ಆಡು ಭಾಷೆಯಲ್ಲಿ ನಾ. ಕಸ್ತೂರಿ ಕಾರ್ಯಕ್ರಮವನ್ನು ರೂಪಿಸಿದರು. ಆದರೆ ಆ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ದವರು ಎ.ಎಸ್.ಎಂ. 

ಎ.ಎಸ್.ಎಂ ನಿಜಕ್ಕೂ script writing machine ಆಗಿದ್ದರು, ಅವರ ಸಮಕಾಲಿನರಾದ ಎಚ್.ಎಸ್,ಪಾರ್ವತಿ, ಶ್ರೀನಿವಾಸನ್ ಮೂತಾದವರ ಹತ್ತಿರ ಮಾತನಾಡುತ್ತ ಅಂದಿನ ದಿನಗಳ ಆಗುಹೋಗುಗಳನ್ನು ಮಾತನಾಡುತ್ತಿದ್ದರು. ಒಂದು ಸಣ್ಣ ಚುಟುಕು ಸಿಕ್ಕರೇ ಸಾಕು ಅದನ್ನು ಒಂದು ಸ್ಚ್ರಿಪ್ಟ್ ತಯಾರು ಮಾಡುತ್ತಿದ್ದರು. ಅವರ ಆ ಪ್ರತಿಭೆ ನಮ್ಮಲ್ಲಿ ಅಚ್ಚರಿ ಮೂಡಿಸುತ್ತಿತ್ತು. “

ಮತ್ತಷ್ಟು ಮುಂದಿನ ಪೋಸ್ಟ್ ನಲ್ಲಿ . . . . . . . 

About these ads

One thought on “ಎ.ಎಸ್.ಎಂ ನಾಟಕೋತ್ಸವದಲ್ಲಿ ಎನ್.ಎಸ್.ಕೆ ನೆನಪಿನ ದೋಣಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s